ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದು, ಕೆಆರ್ ಎಸ್ ಡ್ಯಾಂ ಒಳಹರಿವು ಮತ್ತಷ್ಟು ಇಳಿಕೆಯಾಗಿದೆ.
ನಿನ್ನೆ 9,686 ಕ್ಯೂಸೆಕ್ ಇದ್ದ ಒಳ ಹರಿವು, ಇಂದು 6,185 ಕ್ಯೂಸೆಕ್ ಗೆ ಇಳಿಕೆಯಾಗಿದೆ.
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 100.90 ಅಡಿ ನೀರು ಸಂಗ್ರಹವಾಗಿದೆ.
49.452 ಟಿಎಂಸಿ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ 23.523 ಟಿಎಂಸಿ ನೀರು ಸಂಗ್ರಹವಿದೆ. ಕುಡಿಯುವ ನೀರಿಗಾಗಿ ಡ್ಯಾಂನಿಂದ 544 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 100.90 ಅಡಿ.
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 23.523 ಟಿಎಂಸಿ
ಒಳ ಹರಿವು – 6,185 ಕ್ಯೂಸೆಕ್
ಹೊರ ಹರಿವು – 544 ಕ್ಯೂಸೆಕ್