ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಮನಸ್ಸು ಉಲ್ಲಸಿತವಾಗಲಿದ್ದು ನಿತ್ಯ ಅಲ್ಪ ಸಮಯ ವ್ಯಾಯಮ ಮತ್ತು ಕ್ರೀಡೆಗಳಿಗೆ ಮೀಸಲಿಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಶ್ರೀ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಆರ್‌ಡಿಪಿಆರ್ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಕೂಟಗಳು ನಡೆಯುವ ದಿನಗಳಲ್ಲಿ ಮಾತ್ರ ಆ ಬಗ್ಗೆ ಆಸಕ್ತಿ ತೋರದೆ ನಿರಂತರವಾಗಿ ಗಮನ ಹರಿಸಬೇಕು ಆಹಾರದಷ್ಟೆ ಕ್ರೀಡೆಯು ಮನುಷ್ಯನ ದೇಹಕ್ಕೆ ಅತ್ಯಂತ ಅಗತ್ಯವಾಗಿದ್ದು ರೋಗ ಮುಕ್ತರಾಗಲು ಕ್ರೀಡೆ ಮತ್ತು ಯೋಗವನ್ನು ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದ ಅವರು ಈ ವಿಚಾರದಲ್ಲಿ ತಜ್ಞರು ಮತ್ತು ಅನುಭವಸ್ಥರ ಸಲಹೆ ಮತ್ತು ಮಾರ್ಗದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರು.

ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ಗೆಲುವಿಗೆ ಹಿಗ್ಗದೆ, ಸೋಲಿಗೆ ಕುಗ್ಗದೆ ಸೋಲು-ಗೆಲುವುಗಳನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಿ ಕಡ್ಡಾಯವಾಗಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾಗಬೇಕು ಎಂದು ಕಿವಿ ಮಾತು ಹೇಳಿದರು ಶಾಸಕರು ನಾನು ನಿರಂತರವಾಗಿ ಸರ್ಕಾರಿ ನೌಕರರ ಸಹಾಯಕ್ಕೆ ಬೆನ್ನೆಲುಬಾಗಿ ನಿಲ್ಲುವೆ ಎಂದು ಭರವಸೆ ನೀಡಿದರು.ಕಾರ್ಯಕ್ರಮವನ್ನು ಕುರಿತು ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ತಾಪಂ ಇಒ ಜಿ.ಕೆ.ಹರೀಶ್ ಮಾತನಾಡಿದರು.
ಟಿಹೆಚ್‌ಓ ಡಾ.ಡಿ.ನಟರಾಜು, ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ, ಸಿಡಿಪಿಒ ಅಣ್ಣಯ್ಯ, ಅಗ್ನಿಶಾಮಕ ದಳದ ಠಾಣಾಧಿಕಾರಿ ಲಕ್ಷಿö್ಮಕಾಂತ್ ಯಾದವ್, ಜಿಪಂ ಮುಖ್ಯ ಯೋಜನಾಧಿಕಾರಿ, ಸೌಮಿತ್ರ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಎಸ್.ಭಾಸ್ಕರ್, ಉಪಾಧ್ಯಕ್ಷ ಕೆ.ಎಂ.ಉಮೇಶ್, ಕ್ರೀಡಾಕಾರ್ಯದರ್ಶಿ ಜಿ.ಎಲ್.ಧನಂಜಯ, ಖಜಾಂಚಿ ಮಂಜುನಾಥ್, ಪಿಡಿಒಗಳಾದ ಬಿ.ಕೆ.ರಾಜೇಶ್, ಸಂತೋಷ್, ಕೆ.ನವೀನ್, ರಾಜೇಶ್, ಎ.ಸಿ.ಧನಂಜಯ, ಚಿದಾನಂದ, ಪ್ರತಾಪ್,ತಾಪಂ ವ್ಯವಸ್ಥಾಪಕ ಕರೀಗೌಡ ಮತ್ತಿತರರು ಹಾಜರಿದ್ದರು.