ಹುಣಸೂರು: ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ವನ್ಯ ಜೀವಿ ಪ್ರದೇಶದಲ್ಲಿ ಜಿಂಕೆ ಬೇಟೆಮಾಡಿ ಹೊಲದಲ್ಲಿ ಮಾಂಸವನ್ನು ಬಚ್ಚಿದ್ದನ್ನು ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ವನ್ಯಜೀವಿ ವ್ಯಾಪ್ತಿಯ ನೇಗತ್ತೂರಿನ ಜಮೀನೊಂದರಲ್ಲಿ ಸಂಗ್ರಹಿದ ಜಿಂಕೆ ಮಾಂಸ ಮತ್ತು ಅದಕ್ಕೆ ಬಳಸಿದ್ದ ಮೂರು ಕತ್ತಿಗಳನ್ನು ವಶಪಡಿಸಿಕೊಂಡು ನಾಲ್ಕು ಆರೋಪಿಗಳಲ್ಲಿ ಅಬ್ಬೂರಿನ ಮಧು, ಸಿಂಡೇನಹಳ್ಳಿ ಗ್ರಾಮದ ಪ್ರದೀಪ್ ಆಲಿಯಾಸ್ ಕುಂಡನನ್ನು ಬಂಧಿಸಲಾಗಿದೆ.
ತಪ್ಪಸಿಕೊಂಡಿರುವ ಇನ್ನುಳಿದ ಇಬ್ಬರು ಆರೋಪಿಗಳಾದ ರಾಜು , ಪ್ರಸನ್ನಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
ಕಾರ್ಯಚರಣೆಯಲ್ಲಿ ಹರ್ಷಕುಮಾರ್ ಆದೇಶದ ಮೇರೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಯಾನಂದ್ ರವರ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿಗಳಾದ ರತನ್ ಕುನಾರ್, ಗಣರಾಜ್ ಪಟಕಾರ್, ಸಿದ್ದರಾಜು, ಹೆಚ್.ಎಸ್.ಪ್ರಸನ್ನ ಕುಮಾರ್, ವೀರಭದ್ರಯ್ಯ, ನನೋಹರ್, ಎಂ.ರಾಮು ಗಸ್ತು ವನಪಾಲಕರಾದ, ವಸಂತ ಕುಮಾರ್, ಲಿಂಗರಾಜು, ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
.