Sunday, April 20, 2025
Google search engine

Homeಸ್ಥಳೀಯ೨೦೦ ವರ್ಷಗಳಿಂದಲೂ ಕಾವೇರಿ ಹೋರಾಟದಲ್ಲಿ ಸೋಲು

೨೦೦ ವರ್ಷಗಳಿಂದಲೂ ಕಾವೇರಿ ಹೋರಾಟದಲ್ಲಿ ಸೋಲು

ಮೈಸೂರು: ಕಾವೇರಿ ನೀರು ಹಂಚಿಕೆ ಸಂಬಂಧ ಸಂಕಷ್ಟದ ಸಮಯದಲ್ಲಿ ಮಾತ್ರ ಕಾನೂನು ತೊಡಕುಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಉಳಿದ ಸಮಯದಲ್ಲಿ ಚರ್ಚೆಯನ್ನೇ ಮಾಡುವುದಿಲ್ಲ. ಇದರಿಂದಾಗಿ ೨೦೦ ವರ್ಷಗಳಿಂದಲೂ ಕಾನೂನು ಹೋರಾಟದಲ್ಲಿ ಕರ್ನಾಟಕ ಸೋಲು ಅನುಭವಿಸಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ವತಿಯಿಂದ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾವೇರಿ ವಿವಾದ ಟ್ರಿಬ್ಯುನಲ್ ತೀರ್ಪು ಪ್ರಸ್ತುತ ಸಮಸ್ಯೆಗಳು, ಪರಿಹಾರೋಪಾಯಗಳ ಕುರಿತು ಮಾತನಾಡಿದರು.
೧೮೮೮ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಕಾನೂನು ವಿವಾದಗಳಲ್ಲಿ ಕರ್ನಾಟಕ ಸೋಲು ಅನುಭವಿಸಿದೆ. ೧೮೯೨ರ ಮೊದಲನೇ ಒಪ್ಪಂದ, ೧೯೨೪ರ ೨ನೇ ಒಪ್ಪಂದ, ಮಧ್ಯಂತರ ಆಸದೇಶ, ಟ್ರಿಬ್ಯುನಲ್ ಆರ್ಡರ್‌ಗಳಿಂದ ಕರ್ನಾಟಕ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಲಿಲ್ಲ ಎಂದು ಹೇಳಿದರು.
ಕಾನೂನಿನು ತೀರ್ಪಿನಲ್ಲಿ ಬದಲಾವಣೆ ಬೇಕು. ವೈಜ್ಞಾನಿಕ ವರದಿ ನೀಡಿಲ್ಲ. ಅನೇಕ ತೀರ್ಪುಗಳ ಬಗ್ಗೆ ಸ್ಪಷ್ಟತೆ ಇಲ್ಲ. ಈ ವಿಷಯಗಳನ್ನು ಕೋರ್ಟ್ ಅಥವಾ ಟ್ರಿಬ್ಯುನಲ್ ಮುಂದಿಟ್ಟಿಲ್ಲ ಎಂದು ಬೇಸರಿಸಿದರು.
ಹೆಚ್ಚುವರಿ ನೀರು ದೊರೆಯುವ ಕಾರಣದಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಹೆಚ್ಚು ಮಳೆಯಾದಾಗ ಕಾವೇರಿ, ಕಬಿನಿ ಅಣೆಕಟ್ಟೆಗಳಲ್ಲಿ ನೀರು ಶೇಖರಣೆ ಮಾಡಿಕೊಳ್ಳಲಾಗದು. ಹೆಚ್ಚುವರಿ ನೀರನ್ನು ಮೇಕೆದಾಟು ಅಣೆಕಟ್ಟೆಯಲ್ಲಿ ಶೇಖರಿಸಿದರೆ ಮಳೆ ಕೊರತೆಯಾದಾಗ ಸಹಾಯಕ್ಕೆ ಬರುತ್ತದೆ.
೧೯೨೪ರ ಒಪ್ಪಂದದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಂಶವನ್ನು ಸುಪ್ರೀಂ ಕೋರ್ಟ್ ಅಥವಾ ಟ್ರಿಬ್ಯುನಲ್ ಮುಂದಿಟ್ಟು ಕಾನೂನು ಸಮರ ಆರಂಭಿಸಲು ಸಾಧ್ಯವಾಗಬಹುದು. ಇದರಿಂದ ನಮ ಸಂಕಷ್ಟಕ್ಕೆ ಪರಿಹಾರವೂ ಸಿಗಬಹುದು ಎಂದು ಹೇಳಿದರು.
ಕಾವೇರಿ ನೀರು ಹಂಚಿಕೆ ವಿವಾದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಸ್ತುಸ್ಥಿತಿ ೨೦ ವರ್ಷಗಳ ಹಿಂದೆ ಹೇಗಿತ್ತು? ಈಗಲೂ ಅದೇ ಸ್ಥಿತಿಯಲ್ಲಿದೆ. ಯಾವುದೇ ಬದಲಾವಣೆ ಇಲ್ಲ. ಸರ್ಕಾರ, ರೈತರು, ನೀರಾವರಿ ತಜ್ಞರು ಸಂಪೂರ್ಣವಾಗಿ ತೊಡಗಿಸಿಕೊಂಡು ಈ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಸನ್ನ ಎನ್.ಗೌಡ, ಹೊಸಕೋಟೆ ಬಸವರಾಜು ಮುಂತಾದವರಿದ್ದರು.

RELATED ARTICLES
- Advertisment -
Google search engine

Most Popular