Monday, April 7, 2025
Google search engine

Homeರಾಜ್ಯಸುದ್ದಿಜಾಲಸಿಡಿಲು ಬಡಿದು ದೈವಸ್ಥಾನ ಕಂಬಕ್ಕೆ ಹಾನಿ: ಶಾಸಕ ವೇದವ್ಯಾಸ ಕಾಮತ್ ಭೇಟಿ,ಪರಿಶೀಲನೆ

ಸಿಡಿಲು ಬಡಿದು ದೈವಸ್ಥಾನ ಕಂಬಕ್ಕೆ ಹಾನಿ: ಶಾಸಕ ವೇದವ್ಯಾಸ ಕಾಮತ್ ಭೇಟಿ,ಪರಿಶೀಲನೆ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಪ್ರಮುಖ ಕಂಬಗಳಿಗೆ ಹಾನಿಯಾಗಿವೆ.
ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ ಶಾಸಕರು, ಸಿಡಿಲಿನಿಂದ ಹಾನಿಗೊಳಗಾದ ಭಾಗದ ದುರಸ್ತಿಗೆ ತಕ್ಷಣವೇ ಸೂಕ್ತ ಪರಿಹಾರದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸ್ಥಳೀಯ ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ಬೋಳೂರು, ರಾಹುಲ್ ಶೆಟ್ಟಿ, ಬೋಳೂರು ಜಯಲಕ್ಷ್ಮಿ ಫ್ರೆಂಡ್ಸ್ ನ ಜೀವನ್ ತಲ್ವಾರ್, ಸೇರಿದಂತೆ ದೈವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular