ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸರ್ಕಾರ ಗ್ಯಾರಂಟಿ ಎಂದು ಹೇಳಿ ಅಭಿವೃದ್ಧಿ ಕಾರ್ಯ ನಿಲ್ಲಿಸಿದೆ. ಇದೀಗ ಸರ್ಕಾರಿ ನೌಕರರಿಗೆ ಹೆಚ್ಚುವರಿ ಶೇ ೧೦ % ವೇತನ ಹೆಚ್ಚಳ ಮಾಡಲು ೧೦,೫೦೦ ಕೋಟಿ ಬೇಕು. ಅಷ್ಟು ಹಣ ಖಜಾನೆಯಲ್ಲಿ ಇಲ್ಲ.ಇನ್ನೂ ಮುಂದೆ ನೌಕರರ ಸಂಬಳ ಆಗುವುದು ಕೂಡ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು. ಅವರು ದಕ್ಷಿಣ ಪದವೀಧರ ಶಿಕ್ಷಣ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿವೇಕಾನಂದ ಪರವಾಗಿ ಪಟ್ಟಣದ ಮಹಿಳಾ ಪ್ರಧಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ಪ್ರಚಾರ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿಯಿಂದ ಕಾಂಗ್ರೆಸ್ ಸಿದ್ದರಾಮಯ್ಯನವರ ಸರ್ಕಾರಕ್ಕೆ ಬಹಳಷ್ಟು ಸಂಕಷ್ಟ ಎದುರಾಗಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ ಹಿಂದೆ ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದ ಮತಗಳಿಂದ ಗೆಲವು ಸಾಧಿಸುತ್ತಿದ್ದರು, ಆದರೆ ಈ ಬಾರಿಹಾಗೇ ಆಗಲ್ಲ ಎಂದು ಸ್ಪಷ್ಟ ಪಡಿಸಿದರು. ಶಿಕ್ಷಕರ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದ್ದು, ಪದವೀಧರ ಶಿಕ್ಷಕರ ಪರವಾಗಿ ಸಾಕಷ್ಟು ಪ್ರಮಾಣದಲ್ಲಿ ನೆರವು ನೀಡಿದೆ ಎಂದರು
ಮಾಜಿ ಸಚಿವ ಸಾ.ರಾ.ಮಹೇಶ್ ಶಾಸಕರಾಗಿ, ಸಚಿವರಾಗಿದ್ಸ ವೇಳೆ ಸಾಕಷ್ಟು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ಸಾರೆ. ಕೆ.ಆರ್.ನಗರ, ಸಾಲಿಗ್ರಾಮ, ಭೇರ್ಯ, ಹೆಬ್ಬಾಳು, ಹೊಸೂರು ಮುಂದಾದ ಕಡೆಗಳಲ್ಲಿ ಸರ್ಕಾರಿ ಪ್ರೌಡಶಾಲೆ, ಪದವಿಪೂರ್ವ ಕಾಲೇಜುಗಳ ಕಟ್ಟಡಕ್ಕೆ ೨೫ ಕೋಟಿ ಅನುದಾನ ತಂದು ಹೊಸ ಕಟ್ಟಡ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಅಲ್ಪಕಾಲೇಜು ಸೇರಿದಂತೆ ವಿವಿದೆಡೆ ಬಿರುಸಿನ ಚುನಾವಣಾ ಪ್ರಚಾರ ಮಾಡಿದರು.
ಕುರುಬರ ಸಂಘ ಇರಿವುದು ಸಮುದಾಯದ ಏಳಿಗೆಗೆ ಹೊರತ ರಾಜಕಾರಣಕ್ಕೆ ಅಲ್ಲ : ರಾಜ್ಯ ಕುರುಬರ ಸಂಘದ ಹಂಗಾಮಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಅವರು ಕುರುಬ ಸಮುದಾಯ ದಕ್ಷಿಣ ಪದವೀಧರ ಶಿಕ್ಷಣ ಕ್ಷೇತ್ರದ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸುತ್ತೇವೆ ಎಂದು ಹೇಳಿಕೆ ನೀಡಿವುದು ಖಂಡನೀಯ ಎಂದು ಜಿ.ಪಂ.ಮಾಜಿ ಸದಸ್ಯ ಅಮಿತ್ ದೇವರಹಟ್ಟಿ ತಿಳಿಸಿದರು. ಅವರು ಕೆ.ಆರ್.ನಗರ ಪಟ್ಟಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಣದ ಮೈತ್ರಿ ಅಭ್ಯರ್ಥಿ ವಿವೇಕಾನಂದ ಪರವಾಗಿ ಮೈತ್ರಿ ಪಕ್ಣದ ಮುಖಂಡರ ಜೊತೆಗೂಡಿ ಚುನಾವಣಾ ಪ್ರಚಾರ ಕೈಗೊಂಡು ಮಾದ್ಯಮದವರ ಪ್ರಶ್ನೆ ಉತ್ತರಿಸಿದರು.
ಇದು ಸುಬ್ರಹ್ಮಣ್ಯ ಅವರ ವಯಕ್ತಿಕ ಹೇಳಿಕೆ ಆಗಿದ್ದು, ಈ ರೀತಿಯ ಹೇಳಿಕೆ ನೀಡ ಬಾರದು, ನಾನು ಸೇರಿದಂತೆ ನನ್ನ ಸಮುದಾಯದ ಹಲವು ಕುರುಬ ಸಮುದಾಯ ಮುಖಂಡರು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ವಿವೇಕಾನಂದ ಪರವಾಗಿ ಇದ್ದೇವೆ ಇದು ವಯಕ್ತಿಕ ಎಂದರು. ಕುರುಬ ಸಮುದಾಯ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಕುರುಬರ ಸಂಘ ಇರಿವುದು ಸಮುದಾಯದ ಏಳಿಗೆಗೆ ಹೊರತ ರಾಜಕಾರಣಕ್ಕೆ ಅಲ್ಲ ಎಂದು ರಾಜ್ಯ ಕುರುಬರ ಸಂಘದ ಹಂಗಾಮಿ ಅಧ್ಯಕ್ಷರಿಗೆ ಚಾಟಿ ಬೀಸಿದರು. ಹಾಗೇಯೇ ನಿಮ್ಮ ಹೇಳಿಯನ್ನು ಪತ್ರಿಕಾಗೋಷ್ಠಿ ಕರೆದು ವಾಪಸ್ಸ್ ಪಡೆಯಿರಿ ಎಂದು ತಾಕೀತು ಮಾಡಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲ್ಲೂಕು ಜಾದಳ ವಕ್ತಾರ ಕೆ.ಎಲ್.ರಮೇಶ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಹೆಚ್.ಡಿ.ಪ್ರಭಾಕರ್ ಜೈನ್, ತಾಲ್ಲೂಕು ಜಾದಳ ಅಧ್ಯಕ್ಷ ಹಂಪಾಪುರ ಕುಮಾರ್, ತಾಲ್ಲೂಕು ಬಿಜೆಪಿ ಪಕ್ಷದ ಅಧ್ಯಕ್ಷರಾದ ಸಾ.ರಾ.ತಿಲಕ್, ಹೊಸೂರು ಧರ್ಮ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ಪುರಸಭಾ ಸದಸ್ಯ ಉಮೇಶ್, ಸಂತೋಷ್ ಗೌಡ, ಮಾಜಿ ನಾಮಕರಣ ಸದಸ್ಯರಾದ ಜಿ.ಪಿ.ಮಂಜು, ನಂಜುಂಡ, ಉಮಾಶಂಕರ್(ಗುಂಡಾ), ರಂಗಸ್ವಾಮಿ, ಜೆಡಿಎಸ್ ನಗರ ಪ್ರ.ಕಾರ್ಯದರ್ಶಿ ರುದ್ರೇಶ್, ಗ್ರಾಮಾಂತರ ಕಾರ್ಯದರ್ಶಿ ಮಿರ್ಲೆ ಧನಂಜಯ, ಜೆಡಿಎಸ್ ಮುಖಂಡರಾದ ಮಲ್ಲಪ್ಪ, ರೂಪಸತೀಶ್, ಬಿಜೆಪಿ ಪಕ್ಷದ ಮಾರ್ಕಂಡೇಯ, ಅರಕೆರೆ ಮದು ಸೇರಿದಂತೆ ಅನೇಕರು ಇದ್ದರು.