Friday, April 18, 2025
Google search engine

HomeUncategorizedರಾಷ್ಟ್ರೀಯದೆಹಲಿ ವಿಧಾನಸಭೆ: ಬಿಜೆಪಿಯಿಂದ 9 ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ

ದೆಹಲಿ ವಿಧಾನಸಭೆ: ಬಿಜೆಪಿಯಿಂದ 9 ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ

ನವದೆಹಲಿ: ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ 9 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಜೆಪಿ ಗುರುವಾರ(ಜನವರಿ 16) ಬಿಡುಗಡೆ ಮಾಡಿದೆ.

ಶಿಖಾ ರಾಯ್ ಹಾಗೂ ಅನಿಲ್ ವಸಿಷ್ಠ ಅವರನ್ನು ಕ್ರಮವಾಗಿ ಗ್ರೇಟರ್ ಕೈಲಾಶ್ ಹಾಗೂ ಬಾಬರ್ ಪುರದಿಂದ ಕಣಕ್ಕಿಳಿಸಿದೆ.

ಬಿಜೆಪಿಯು ಈವರೆಗೂ 68 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ ಎರಡು ಕ್ಷೇತ್ರಗಳನ್ನು ಮೈತ್ರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಎಪಿ ಮುಖಂಡ ಸೌರಭ್ ಭಾರದ್ವಾಜ್ ವಿರುದ್ಧ ರಾಯ್ ಅವರನ್ನು ಹಾಗೂ ಅನಿಲ್ ವಸಿಷ್ಠ ಅವರನ್ನು ಗೋಪಾಲ್ ರಾಯ್ ವಿರುದ್ಧ ಕಣಕ್ಕಿಳಿಸಿದೆ.

ಫೆಬ್ರವರಿ 5ರಂದು ಒಂದು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 8 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

RELATED ARTICLES
- Advertisment -
Google search engine

Most Popular