ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಬಿಜೆಪಿ 42 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಫೆಬ್ರವರಿ 5 ರಂದು ದೆಹಲಿಯ 70 ಕ್ಷೇತ್ರಗಳಿಗೆ ಮತದಾನ ನಡೆದಿದ್ದು ಇಂದು ಫಲಿತಾಂಶ ಹೊರ ಬೀಳುತ್ತಿದೆ. ಬಿಜೆಪಿ 42, ಎಪಿಪಿ 28 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಮತ್ತು ಇತರೇ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ.
ಇನ್ನು ದೆಹಲಿ ಮಾಜಿ ಸಿಎಂ ಆಪ್ ಮುಖ್ಯಸ್ಥಅರವಿಂದ ಕ್ಷೇಜ್ರಿವಾಲ್ ನವದೆಹಲಿಯಲ್ಲಿ 343 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಹಾಗೆಯೇ ದೆಹಲಿ ಸಿಎಂ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.