Sunday, April 20, 2025
Google search engine

HomeUncategorizedರಾಷ್ಟ್ರೀಯದೆಹಲಿಯ ಮದ್ಯ ನೀತಿ ಹಗರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ​ಗೆ 4ನೇ ಬಾರಿ ಸಮನ್ಸ್​...

ದೆಹಲಿಯ ಮದ್ಯ ನೀತಿ ಹಗರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ​ಗೆ 4ನೇ ಬಾರಿ ಸಮನ್ಸ್​ ಜಾರಿ

ದೆಹಲಿ: ದೆಹಲಿಯ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸಿಎಂ ಅರವಿಂದ್ ಕೇಜ್ರಿವಾಲ್ ​ಗೆ 4ನೇ ಬಾರಿಗೆ ಸಮನ್ಸ್​ ಜಾರಿ ಮಾಡಿದ್ದು, ಜನವರಿ 18ರಂದು ಹಾಜರಾಗುವಂತೆ ಸೂಚಿಸಿದೆ.

ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್​ ಅವರಿಗೆ ಇಡಿ ನೀಡಿರುವ ನಾಲ್ಕನೇ ಸಮನ್ಸ್​ ಇದಾಗಿದ್ದು, ಇದಕ್ಕೂ ಮುನ್ನ ನವೆಂಬರ್ 2 ರಂದು, 21ರಂದು ಹಾಗೂ ಜನವರಿ 3 ರಂದು ಮೂರು ಬಾರಿ ಸಮನ್ಸ್​ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಈ ನಾಲ್ಕನೇ ಸಮನ್ಸ್​ ಬಳಿಕ ಅರವಿಂದ್ ಕೇಜ್ರಿವಾಲ್ ಇಡಿ ಮುಂದೆ ಹಾಜರಾಗುತ್ತಾರೋ ಇಲ್ಲವೋ ಕಾದುನೋಡಬೇಕಿದೆ. ಕೊನೆಯ ಸಮನ್ಸ್​ ನಂತರ ಆಮ್ ಆದ್ಮಿ ಪಕ್ಷವು ಇಡಿಯೊಂದಿಗೆ ಸಹಕರಿಸಲು ಬಯಸುತ್ತದೆ ಎಂದು ಹೇಳಿತ್ತು. ನಾಲ್ಕನೇ ಸಮನ್ಸ್ ​ಗೆ ಸಂಬಂಧಿಸಿದಂತೆ ಆಮ್​ ಆದ್ಮಿ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕೇಜ್ರಿವಾಲ್ ಬಂಧಿಸಲು ಎಲ್ಲಾ ತಯಾರಿ ನಡೆಸಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ, ಇಷ್ಟೇ ಅಲ್ಲದೆ ವಿಚಾರಣೆ ನೆಪದಲ್ಲಿ ಅವರನ್ನು ಕರೆಸಿ ಬಂಧಿಸಲು ಇಡಿ ನಿರ್ಧರಿಸಿದೆ ಎಂದಿದೆ.

ದೆಹಲಿ ಸರ್ಕಾರದ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್, ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ, ಕೇಜ್ರಿವಾಲ್ ಮನೆ ಮೇಲೆ ಇಡಿ ದಾಳಿ ನಡೆಸಬಹುದು ಎಂದು ಬರೆದುಕೊಂಡಿದ್ದರು.

RELATED ARTICLES
- Advertisment -
Google search engine

Most Popular