Sunday, April 20, 2025
Google search engine

HomeUncategorizedರಾಷ್ಟ್ರೀಯದೆಹಲಿ ಕಾಲ್ತುಳಿತ ಪ್ರಕರಣ: ಉನ್ನತ ಮಟ್ಟದ ಸಮಿತಿ ರಚನೆ

ದೆಹಲಿ ಕಾಲ್ತುಳಿತ ಪ್ರಕರಣ: ಉನ್ನತ ಮಟ್ಟದ ಸಮಿತಿ ರಚನೆ

ನವದೆಹಲಿ: ದೆಹಲಿ ಕಾಲ್ತುಳಿತ ಪ್ರಕರಣದ ತನಿಖೆ ನಡೆಸಲು ಇಬ್ಬರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂ ದು ರೈ ಲ್ವೆ ಮಂಡಳಿ ಮಾಹಿತಿ ಮತ್ತು ಪ್ರಚಾರದ ಕಾರ್ಯ ನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.

ಉತ್ತರ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ನರಸಿಂಗ್ ದೇವು ಮತ್ತು ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಪಂಕಜ್ ಗಂಗ್ವಾರ್ ಸಮಿತಿಯ ಸದಸ್ಯರಾಗಿದ್ದಾರೆ. ಇಂದಿನಿಂದಲೇ ತನಿಖೆ ಆರಂಭಿಸಿರುವ ಸಮಿತಿಯು ರೈಲು ನಿಲ್ದಾಣದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಸುರಕ್ಷಿತವಾಗಿರಿಸುವಂತೆ ಆದೇಶ ನೀ ಡಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪ್ರಯಾಣಿಕರನ್ನು ವಿಶೇಷ ರೈಲುಗಳ ಮೂಲಕ ಕಳುಹಿಸಿಕೊಡಲಾಗಿದೆ. ಯಥಾಸ್ಥಿತಿಯಂ ತೆ ರೈಲು ಸಂಚಾರ ಪ್ರಾರಂ ಭವಾಗಿದೆ ಎಂದು ದಿಲೀ ಪ್ ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular