ರುಚಿಕರ ಹಾಗೂ ಆರೋಗ್ಯಕರವಾದ ಬಾದಾಮಿ-ಖರ್ಜೂರದ ಹಾಲು ಮಾಡುವ ವಿಧಾನ…
ಬೇಕಾಗುವ ಪದಾರ್ಥಗಳು
ಹಾಲು – 3 ಬಟ್ಟಲು, ಖರ್ಜೂರ – 1,0 ಸಕ್ಕರೆ ಅಥವಾ ಬೆಲ್ಲ- ರುಚಿಗೆ ತಕ್ಕಷ್ಟು, ಬಾದಾಮಿ – 12, ಏಲಕ್ಕಿ ಪುಡಿ – ಕಾಲು ಚಮಚ, ಕೇಸರಿ ದಳ– ಸ್ವಲ್ಪ (ಬಿಸಿ ಹಾಲಿನಲ್ಲಿ ನೆನೆಸಿಟ್ಟುಕೊಳ್ಳಿ)
ಮಾಡುವ ವಿಧಾನ
ಮೊದಲಿಗೆ ಹತ್ತರಿಂದ- ಹನ್ನೆರಡು ಬಾದಾಮಿಯನ್ನು ತೆಗೆದುಕೊಂಡು ರಾತ್ರಿ ಅಥವಾ ಸುಮಾರು 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ನೀರಿನಲ್ಲಿ ನೆನೆದ ಬಾದಾಮಿಯ ಸಿಪ್ಪೆ ಸುಲಿದು ಇಟ್ಟುಕೊಳ್ಳಬೇಕು . ಪಾತ್ರೆಯಲ್ಲಿ ಹಾಲನ್ನು ಹಾಕಿ ಸುಮಾರು ಐದು ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು. ಜೊತೆಗೆ ಬಾದಾಮಿ ಹಾಗೂ ಖರ್ಜೂರವನ್ನು 5 ಚಮಚ ಹಾಲಿನೊಂದಿಗೆ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಹೀಗೆ ಪೇಸ್ಟ್ ಮಾಡಿಕೊಂಡದ್ದನ್ನು ಕುದಿಯುತ್ತಿರುವ ಹಾಲಿಗೆ ಹಾಕಿ ಸರಿ ಸುಮಾರು ಮೂರರಿಂದ ನಾಲ್ಕು ನಿಮಿಷ ಕುದಿಯಲು ಬಿಟ್ಟು , ನಂತರ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ, ಇದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಸ್ಟೌ ಆಫ್ ಮಾಡಿಕೊಳ್ಳಬೇಕು. ಕೊನೆಗೆ ಹಾಲಿನಲ್ಲಿ ನೆನೆಸಿದ ಕೇಸರಿ ದಳವನ್ನು ಸೇರಿಸಿ ಬಾದಾಮಿ ಚೂರುಗಳಿಂದ ಅಲಂಕರಿಸಿದರೆ ಆರೋಗ್ಯಕರ ಹಾಗೂ ರುಚಿಕರವಾದ ಬಾದಾಮಿ ಖರ್ಜೂರದ ಹಾಲು ನಿಮಗೆ ಸವಿಯಲು ಸಿದ್ಧವಾಗುತ್ತದೆ.