ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ೬ ಕ್ಷೇತ್ರವನ್ನು ಬಿಜೆಪಿಯು ಜೆಡಿಎಸ್‌ಗೆ ಬಿಟ್ಟುಕೊಡಲಿ ಎಂದು ಜೆಡಿಎಸ್‌ನ ಮುಖಂಡ ಜಿ.ಟಿ ದೇವೇಗೌಡ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ – ಜೆಡಿಎಸ್ ಮೈತ್ರಿಯಲ್ಲಿ ೨೮ ಕ್ಷೇತ್ರ ಗೆಲ್ಲುತ್ತೇವೆ. ಆದರೆ ೨೮ ಕ್ಷೇತ್ರಗಳಲ್ಲಿ ೬ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಲಿ ಎಂದು ತಿಳಿಸಿದರು.
ಬಿಜೆಪಿಯು ತುಮಕೂರು, ಹಾಸನ ,ಮಂಡ್ಯ ಮೈಸೂರು ,ಚಿಕ್ಕಬಳ್ಳಾಪುರ ,ಕೋಲಾರ ,ಬೆಂಗಳೂರು ಉತ್ತರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು. ಈ ೬ ಕ್ಷೇತ್ರ ಕೇಳುವಂತೆ ನಮ್ಮ ನಾಯಕರಿಗೆ ಹೇಳಿದ್ದೇವೆ ಎಂದು ಹೇಳಿದರು.