ಯಳಂದೂರು : ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ದೆಹಲಿ ರಾಜ್ಯಸಭೆಯಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಆಡಿದ ಮಾತುಗಳು ವಾಪಸ್ ಪಡೆಯಬೇಕು ಜತೆಗೆ ದೇಶದ ಗೃಹಮಂತ್ರಿ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿ ಜನತೆಗೆ ಕ್ಷಮೆ ಕೋರಬೇಕೆಂದು ಕಾಂಗ್ರೆಸ್ ಮುಖಂಡ ಹೊನ್ನೂರು ರಾಘವೇಂದ್ರ ಆಗ್ರಹಿಸಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಶೋಕಿಯಾಗಿದೆ, ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದ್ದರೆ ಏಳು ಜನ್ಮದ ವರೆಗೂ ಸ್ವರ್ಗ ಲಭ್ಯವಾಗುತ್ತಿತ್ತು, ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಈ ಮೇಲಿನ ಹೇಳಿಕೆಯಲ್ಲಿ ಅಂಬೇಡ್ಕರ್ ವಿರೋಧಿ ಮನೋಭಾವ ಎದ್ದು ಕಾಣುತ್ತೀದೆ. ಇಂತಹ ಅಸೂಕ್ಷ್ಮ ಮತ್ತು ಅಭದ್ರ ಹೇಳಿಕೆಯನ್ನು ನೀಡಿರುವುದು ದೊಡ್ಡ ದುರಂತವಾಗಿದೆ.
ಇಡೀ ದೇಶದ ಶೋಷಿತ ವರ್ಗಗಳಿಗೆ ಮಾನವೀಯ ಬದುಕು ನೀಡಿದ ಶಕ್ತಿ ಬಾಬಾ ಸಾಹೇಬರು ಕೊಟ್ಟ ಸಂವಿಧಾನ ಮತ್ತು ಅವರ ಮಾರ್ಗದರ್ಶನ ತತ್ವಗಳಿಂದ ಬಂದಿದೆ. ಪ್ರಜೆಗಳಿಗೆ ನ್ಯಾಯ ಸಿಗುವ ಲೋಕಸಭೆಯ ಸಭಾಂಗಣದಲ್ಲಿ ಡಾ.ಬಿಆರ್.ಅಂಬೇಡ್ಕರ್ ಅವರ ಹೆಸರನ್ನು ಕೇವಲವಾಗಿ ವರ್ತಿಸಿ ಹೇಳಿರುವುದು ನಾನು ಅತೀ ತೀವ್ರವಾಗಿ ಖಂಡಿಸುತ್ತೇನೆ ಎಂದು ಪ್ರಕಣೆಯಲ್ಲಿ ತಿಳಿಸಿದ್ದಾರೆ.