Saturday, April 19, 2025
Google search engine

Homeಅಪರಾಧವಿದ್ಯಾರ್ಥಿಗಳ ಹತ್ತಿರ ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಬಲೆಗೆ ಬಿದ್ದ ಪ್ರಿನ್ಸಿಪಾಲ್

ವಿದ್ಯಾರ್ಥಿಗಳ ಹತ್ತಿರ ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಬಲೆಗೆ ಬಿದ್ದ ಪ್ರಿನ್ಸಿಪಾಲ್

ಚಿಕ್ಕಮಗಳೂರು : ಸಾಮಾನ್ಯವಾಗಿ ನಾವು ಸರ್ಕಾರಿ ಕಚೇರಿಗಳಲ್ಲಿ ಇನ್ನಿತರೆ, ಸರ್ಕಾರಿ ಸಂಬಂಧ ಕೆಲಸಗಳಾಗಬೇಕೆದ್ದರೆ ಲಂಚ ಪಡೆದುಕೊಳ್ಳುವರನ್ನು ನೋಡಿದ್ದೇವೆ. ಆದರೆ ಚಿಕ್ಕಮಗಳೂರಿನಲ್ಲಿ ಪರೀಕ್ಷೆಗೆ ಕೂರಿಸಲು ವಿದ್ಯಾರ್ಥಿಗಳಿಂದ ಪ್ರಿನ್ಸಿಪಾಲ್ ಒಬ್ಬರು ಲಂಚ ತೆಗೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಕಡೂರು ತಾಲೂಕಿನ ಬೀರೂರು ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಿಸಲು ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಲೋಕಾ ಬಲೆಗೆ ಬಿದ್ದಿದ್ದಾರೆ. ಪ್ರಿನ್ಸಿಪಾಲ್ ಪ್ರವೀಣ್, ಎಫ್.ಡಿ.ಎ ಸದಾಶಿವಯ್ಯ ಎಂದು ತಿಳಿದುಬಂದಿದೆ.

ಕಾಲೇಜಿನಲ್ಲಿ ೮ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಹಾಜರಾತಿ ಕೊರತೆಯಾಗಿದೆ. ೮ ವಿದ್ಯಾರ್ಥಿಗಳ ಬಳಿಯೂ ಪ್ರಿನ್ಸಿಪಾಲ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಎಫ್ ಡಿ ಎ ಆದಂತಹ ಸದಾಶಿವಯ್ಯಗೆ ಈಗಾಗಲೇ ವಿದ್ಯಾರ್ಥಿಗಳು ಫೋನ್ ಪೇ ಮೂಲಕ ೧೦,೦೦೦ ಕಳುಹಿಸಿದ್ದರು.ಇಂದು ಪ್ರಿನ್ಸಿಪಾಲ್ ಪ್ರವೀಣ ೪೦೦೦ ನಗದು ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಇದೀಗ ಅವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular