ಮಂಡ್ಯ: ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರಾಜಿನಾಮೆಗೆ ಆಗ್ರಹಿಸಿ ಪೇ ಸಿಎಸ್ ಪೋಸ್ಟರ್ ಹಿಡಿದು ಬಿಜೆಪಿ ಕಾರ್ಯಕರ್ತರು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನೆನ್ನೆಯಿಂದ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.
ಎರಡನೇ ದಿನವಾದ ಇಂದು ಧರಣಿ ಸತ್ಯಾಗ್ರಹ ಮುಂದುವರಿಸಿರುವ ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಸ್ಥಳಿಯ ನಾಯಕರು ಸಾಥ್ ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಬಿಜೆಪಿ ಬಿಜೆಪಿ ಸರ್ಕಾರವನ್ನ 40% ಸರ್ಕಾರ ಎಂದು ಟೀಕಿಸುತ್ತಿದ್ದರು. ಆದರೆ ಇಂದು ಕಾಂಗ್ರೆಸ್ ಸರ್ಕಾರ 55% ಕಮಿಷನ್ ಗೆ ಇಳಿದಿದೆ. ಈಗಾಗಲೇ ಒಬ್ಬ ಗುತ್ತಿಗೆದಾರನ ಕಾಂಗ್ರೆಸ್ ಸರ್ಕಾರ ಬಲಿ ಪಡೆದಿದೆ. ಪರೋಕ್ಷವಾಗಿಯೇ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಬೆಂಬಲ ನೀಡ್ತಿದೆ. ತಕ್ಷಣವೇ ಸಚಿವ ಚಲುವರಾಯಸ್ವಾಮಿ ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ನಮ್ಮ ಆಹೋರಾತ್ರಿ ಧರಣಿ ಮುಂದುವರಿಸುವುದಾಗಿ ಪರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.