Thursday, April 3, 2025
Google search engine

Homeಸ್ಥಳೀಯಪ್ರಕರಣ ಇತ್ಯರ್ಥಪಡಿಸಲು 80 ಸಾವಿರ ಲಂಚಕ್ಕೆ ಬೇಡಿಕೆ : ಪಿಎಸ್ಐ ಲೋಕಾಯುಕ್ತ ಬಲೆಗೆ

ಪ್ರಕರಣ ಇತ್ಯರ್ಥಪಡಿಸಲು 80 ಸಾವಿರ ಲಂಚಕ್ಕೆ ಬೇಡಿಕೆ : ಪಿಎಸ್ಐ ಲೋಕಾಯುಕ್ತ ಬಲೆಗೆ

ಮೈಸೂರು : ಪ್ರಕರಣ ಒಂದನ್ನು ಇತ್ಯರ್ಥ ಪಡಿಸಲು ಪಿಎಸ್ಐ ಅಧಿಕಾರಿ ಒಬ್ಬ 80,000ಕ್ಕೆ ಬೇಡಿಕೆ ಇಟ್ಟಿದ್ದು ಈ ವೇಳೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ನಡೆದಿದೆ.

ಬೆಟ್ಟದಪುರ ಠಾಣೆಯಲ್ಲಿ ಪಿಎಸ್ಐ ಶಿವಶಂಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಠಾಣೆಯ ಪಿಎಸ್ಐ 80,000 ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಗಳ ಬಲೆಗೆ ಬಿದ್ದಿದ್ದಾರೆ. ಪ್ರಕರಣ ಒಂದನ್ನು ಇತ್ಯರ್ಥ ಗೊಳಿಸಲು ಲಂಚಕ್ಕೆ ಶಿವಶಂಕರ್ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಲೋಕಾ ಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. 80,000 ಹಣ ಪಡೆಯುವ ವೇಳೆ ಪಿಎಸ್ಐ ಶಿವಶಂಕರ್ ರೆಡ್ ಹ್ಯಾಂಡ್ ಆಗಿ ಸಿಗಿಬಿದ್ದಿದ್ದಾರೆ. ಸದ್ಯ ಪಿಎಸ್ಐ ಶಿವಶಂಕರ್ ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular