ಮಂಡ್ಯ:ಗ್ರಾಮ ಪಂಚಾಯಿತಿ ಸದಸ್ಯ ಸುರೇಂದ್ರ ವಿರುದ್ಧ ಸುಳ್ಳು ದೂರು ನೀಡಿ ಮೊಕದ್ದಮೆ ದಾಖಲಿಸಿರುವ ಆರೋಪದ ಮೇಲೆ ಮಂಡ್ಯದಲ್ಲಿ ಹಲಗೂರು ಪಿಡಿಓ ರುದ್ರಯ್ಯ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು. ಮಂಡ್ಯದ ಸಂಜಯ ವೃತ್ತದಿಂದ ಎಸ್ಪಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿ ಹಲಗೂರು ಗ್ರಾಮ ಪಂಚಾಯಿತಿ PDO ರುದ್ರಯ್ಯ ಅಮಾನತ್ತಿಗೆ ಆಗ್ರಹಿಸಲಾಯಿತು.
ಹಲಗೂರು ಗ್ರಾಪಂ PDO ರುದ್ರಯ್ಯ ಪಂಚಾಯಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿದ್ದು, ಸರ್ಕಾರಿ ಜಮೀನುಗಳನ್ನು ಅಕ್ರಮ ಖಾತೆ ಮಾಡಿರುವ ಆರೋಪದ ಮೇಲೆ ರುದ್ರಯ್ಯ ವಿರುದ್ಧ ಲೋಕಾಯುಕ್ತ ಹಾಗೂ ಹಿರಿಯ ಅಧಿಕಾರಿಗಳಿಗೆ ಸುರೇಂದ್ರ ಅವರು ದೂರು ನೀಡಿದ್ದು, ಪಿಡಿಓ ರುದ್ರಯ್ಯನ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದಕ್ಕೆ ಸುರೇಂದ್ರ ವಿರುದ್ಧ ಸುಳ್ಳು ದೂರು ಆರೋಪ ಮಾಡಿದ್ದು, ರುದ್ರಯ್ಯ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಗೆ ಹಾಗೂ ರುದ್ರಯ್ಯ ಅವರ ಅಮಾನತ್ತಿಗೆ ಆಗ್ರಹಿಸಿ ಜೊತೆಗೆ ಗ್ರಾಮ ಪಂಚಾಯಿತಿ ಸದಸ್ಯ ಸುರೇಂದ್ರ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಒತ್ತಾಹಿಸಿ ಮಂಡ್ಯ ಎಸ್ಪಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಓಗೆ ಮನವಿ ಕೊಟ್ಟು ಆಗ್ರಹಿಸಲಾಯಿತು.