ಮೈಸೂರು: ಚನ್ನಪಟ್ಟಣ ಉಪಚುನಾವಣೆಯ ಚುನಾವಣಾ ಪ್ರಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತಾ ಅವನು ಕರಿಯಾ ಎಂದು ಮೂದಲಿಸಿತ್ತಾನೆ, ಜತೆಗೆ ಇಡೀ ದೇವೇಗೌಡರ ಕುಟುಂಬವನ್ನು ಮುಸ್ಲಿಮರು ಒಂದು ರೂ ಅಂತೆ ಸಂಗ್ರಹಿಸಿ ಕೊಂಡುಕೊಳ್ಳುತ್ತೇವೆ ಎಂದು ಧಾರ್ಮಿಕ ಸಂಘರ್ಷಕಕ್ಕೆ ಕಿಡಿ ಹೊತ್ತಿಸಿದ್ದಾನೆ, ಸಂವಿಧಾನವೇ ಹೇಳುವಂತೆ ಯಾವುದೇ ವ್ಯಕ್ತಿಯ ಬಣ್ಣ ಧರ್ಮ ಹಾಗೂ ಜಾತಿಯ ವಿಚಾರವಾಗಿ ಅಸಮಾನತೆ ಎತ್ತಿತೋರುವುದು ತಪ್ಪು ಎಂದು ಹೇಳಿದೆ ಹೀಗಿದ್ದು ಸಂವಿಧಾನದ ಆಶಯಗಳ ಮೇಲೆ ಪ್ರಮಾಣ ಪಚನ ಸ್ವೀಕರಿಸಿರುವ ಈ ಸಚಿವನ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತನ್ನ ಮಂತ್ರಿಮಂಡಲದ ಸಚಿವ ನೋರ್ವನ ಅನಾಗರಿಕ ನಡೆಗೆ ಇದುವರೆಗೂ ಖಂಡನೆ ಮಾಡಿಲ್ಲ ಇಂತಹ ಸಮಾಜಘಾತಕರು ಸಮಾಜದ ಅಶಾಂತಿ ಬಯಸುವವರು ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕರ್ನಾಟಕದ ಶಾಂತಿಗೆ ಭಂಗ ತರುವಂತದ್ದು ಹಾಗಾಗಿ ನಾವು ಈ ಗೋಷ್ಠಿಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಆಗ್ರಹ ಮಾಡುತ್ತಿರುವುದು ಇಷ್ಟೆ ಈ ಹೇಳಿಕೆಯ ದುರುದ್ದೇಶವನ್ನು ಅರಿತು ಸಿದ್ದರಾಮಯ್ಯನವರು ಸಚಿವ ಜಮೀರ್ ಅಹಮದ್ನನ್ನು ಮಂತ್ರಿಮಂಡಲದಿಂದ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದೇವೆ.
ದೇವೇಗೌಡರು ಒಕ್ಕಲಿಗ ಸಮಾಜದ ಅಗ್ರಮಾನ್ಯ ನಾಯಕರು. ದೇವೇಗೌಡೇರಿಗೆ ಆಗುವ ಅವಮಾನ ದೇವೇಗೌಡರಿಗೆ ಸಲ್ಲುವ ಗೌರವ ಎರಡು ಸಹ ಒಕ್ಕಲಿಗ ಸಮಾಜಕ್ಕೆ ಸಲ್ಲುವ ಸಂಗತಿಗಳು ಎಂದು ಇಡಿ ಸಮಾಜ ಭಾವಿಸುತ್ತಿದೆ. ಒಕ್ಕಲಿಗರು ಮತ್ತು ಮುಸ್ಲಿಮರು ಈ ಸಮಾಜದಲ್ಲಿ ಬಾತೃತ್ವದ ಸಂಬಂಧಗಳನ್ನು ಹೊಂದಿದ್ದು ಒಕ್ಕಲಿಗರ ಕೃಷಿ ಕಾರ್ಯಗಳಲ್ಲಿ ಮುಸ್ಲಿಮರು ಮುಸ್ಲಿಮರ ವ್ಯಾಪಾರ ಕಾಯಕದಲ್ಲಿ ಒಕ್ಕಲಿಗರು ಕೊಡುಕೊಳ್ಳುವಿಕೆಯ ಕಾಯಕದೊಡನೆ ಅನ್ಯೋನ್ಯವಾಗಿರುವ ಈ ಸಮಾಜದಲ್ಲಿ ದೇವೇಗೌಡರನ್ನು ಕೊಂಡಿ ಕೊಳ್ಳುತ್ತೇನೆ ಎಂಬುವ ಜಮೀರನ ಹೇಳಿಕೆ ಇಡೀ ಒಕ್ಕಲಿಗ ಸಮಾಜವನ್ನು ಕೊಂಡುಕೊಳ್ಳುತ್ತೇವೆ ಎಂದಂತೆ ಭಾಸವಾಗಿದೆ. ಇದು ಒಕ್ಕಲಿಗ ಸಮಾಜದ ಕೋಪಾಗ್ನಿಗೆ ಕಾರಣವಾಗಿದೆ.
ಜಮೀರನ ಇಂತಹ ವಿಕೃತ ಹೇಳಿಕೆಗಳು ಇದೆ ಮೊದಲಲ್ಲ ಈ ಮೊದಲು ಹಲವು ಬಾರಿ ಸಹ ಜನಸಂಖ್ಯೆ ವಿಚಾರದಲ್ಲಿ ಒಕ್ಕಲಿಗರಿಗಿಂತ ನಾವು ಹೆಚ್ಚಿದ್ದೇವೆ ಎಂಬ ಉಡಾಫೆಯ ಮಾತನಾಡಿದ ಈಗ ಹಲವು ಬಾರಿ ತನ್ನ ಕುಚೇಷ್ಟೆ ಮಾತುಗಳಿಂದ ಚರ್ಚೆಗೆ ಗ್ರಾಸವಾಗಿದ್ದಾನೆ ಹಾಗಾಗಿ ಇಂತಹ ಅಯೋಗ್ಯ ಮನಸ್ಥಿತಿಯ ಸಚಿವ ಸಚಿವ ಸಂಪುಟದಲ್ಲಿ ಮುಂದುವರೆಯುವುದು ಕರ್ನಾಟಕ ಸರ್ಕಾರವೇ ಒಕ್ಕಲಿಗರ ವಿರೋಧಿ ನೀತಿಯನ್ನು ಬೆಂಬಲಿಸುತ್ತದೆ ಎಂಬಂತೆ ಆಗುತ್ತದೆ.
ಚಾಮರಾಜಪೇಟೆಯ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಸಾಮಾನ್ಯ ಜಮೀರ್ ಅಹ್ಮದ್ನನ್ನು ಶಾಸಕನಾಗಿ ಮಾಡಲು ಅಂದು ಇದೇ ದೇವೇಗೌಡರು ಇದೇ ಕುಮಾರಸ್ವಾಮಿ ದರಿದ್ರ ನಾರಾಯಣ ಎಂಬ ಯಾತ್ರೆಯನ್ನು ಮಾಡುವ ಮೂಲಕ ಆತನ ವಿಧಾನಸಭಾ ಪ್ರವೇಶಕ್ಕೆ ದಾರಿ ತೋರಿಸಿದರು ಇಂದಿನ ಆತನ ರಾಜಕೀಯ ಬೆಳವಣಿಗೆಯಲ್ಲಿ ಶೇಕಡ 100 ಭಾಗದ ಕೊಡುಗೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರದ್ದಾಗಿದೆ ಹೀಗಿರುವಾಗ ಉಂಡ ಎಲಿಗೆ ಉಗುಳುವ ಈ ಹೀನ ಮನಸ್ಥಿತಿಯ ಮನುಷ್ಯ ಈ ಸಮಾಜಕ್ಕೆ ಕಂಟಕ ಇಂತಹ ಸಮಾಜಘಾತುಕರನ್ನು ರಾಜಕೀಯ ಸ್ಥಾನಮಾನಗಳಲ್ಲಿ ಮುನ್ನಲೆಗೆ ತರುವುದೇ ಈ ಸಮಾಜಕ್ಕೆ ಇರುವ ದೊಡ್ಡ ಅಪಾಯ.
ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳುತ್ತೇವೆ, ಕುಮಾರಸ್ವಾಮಿ ಒಬ್ಬ ಕರಿಯ ಎನ್ನುವ ಈ ಉದ್ಧಟತನದ ಹೇಳಿಕೆಗಳು ಇಡೀ ಒಕ್ಕಲಿಗ ಸಮಾಜದ ಮನಸ್ಸಿಗೆ ಘಾಸಿಯನ್ನು ಉಂಟು ಮಾಡಿದೆ. ಸಮಾಜದಲ್ಲಿ ಭಾತೃತ್ವ ಹೊಂದಿರುವ ಮುಸ್ಲಿಂ ಮತ್ತು ಒಕ್ಕಲಿಗ ಸಮುದಾಯದ ನಡುವೆ ಉತ್ತಮ ಸಂಬಂಧವಿದೆ ಈ ಸಂಬಂಧವನ್ನ ಒಡೆದು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹೀನ ಮನಸ್ಥಿತಿಯನ್ನು ಈ ಜಮೀರ್ ಹೊಂದಿದ್ದಾನೆ. ಈತನಿಂದಾಗಿ ನಾಳೆ ಮುಸ್ಲಿಂ ಸಮುದಾಯ ಒಕ್ಕಲಿಗ ಸಮುದಾಯ ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಈ ಸಮಾಜದಲ್ಲಿ ಅಶಾಂತಿಗೆ ಕಾರಣರಾಗಬಾರದು ಎಂದರೆ ಈ ಅಯೋಗ್ಯ ಸಚಿವನನ್ನು ಈ ಕೂಡಲೇ ಸಚಿವ ಸ್ಥಾನದಿಂದ ಕೈಬಿಡಬೇಕು ಇಲ್ಲವಾದರೆ ಈತನ ಹೇಳಿಕೆಗೆ ತಕ್ಕ ಶಾಸ್ತಿಯಂತೆ ಇಡೀ ರಾಜ್ಯದ ಒಕ್ಕಲಿಗ ಸಮುದಾಯ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ. ಇದಕ್ಕೆ ಹಿಂದೂ ಮುಸ್ಲಿಂ ಒಕ್ಕಲಿಗ ಮುಸ್ಲಿಂ ಹೋರಾಟ ಎಂದು ಬಣ್ಣ ಕಟ್ಟಿ ಮಾತನಾಡಬಾರದು ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡದಂತೆ ಈ ಕೂಡಲೇ ಈ ಅಯೋಗ್ಯ ಸಚಿವನನ್ನು ಸಂಪುಟದಿಂದ ವಜಾ ಮಾಡಬೇಕೆಂದು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ಇತರೆ ಒಕ್ಕಲಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಆಗ್ರಹಿಸುತ್ತಿದ್ದೇವೆ.
ಇಂತಹ ಹೇಳಿಕೆಗಳನ್ನು ಕೊಡುವ ಯಾವುದೇ ರಾಜಕಾರಣಿ ಆಗಲಿ ಅವರನ್ನು ಮುಂದಿನ ದಿನಗಳಲ್ಲಿ ನಮ್ಮ ಒಕ್ಕಲಿಗ ಸಮುದಾಯ ಯಾವ ರೀತಿ ಪಾಠ ಕಲಿಸಬೇಕು ಆ ರೀತಿ ಪಾಠವನ್ನು ಕಲಿಸೆ ಕಲಿಸುತ್ತೇವೆ ಎoದು ಒಕ್ಕಲಿಗರ ಸಂಘ (ರಿ)ಮೈಸೂರು ಜಿಲ್ಲೆ, ನಿರ್ದೇಶಕರಾದ ಎ. ರವಿ ಎಚ್ಚರಿಕೆ ನೀಡಿದ್ದಾರೆ.