ತುಮಕೂರು: ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಆರನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಹೋರಾತ್ರಿ ಪ್ರತಿಭಟನೆ. ನಡೆಸಲಾಗುತ್ತಿದೆ.
ಚುನಾವಣೆಗೂ ಮೊದಲೇ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. 18 ಸಾವಿರದಿಂದ 8 ಸಾವಿರಕ್ಕೆ ಕೊಬ್ಬರಿ ಬೆಲೆ ಇಳಿದಿತ್ತು. ತುಮಕೂರು ಅತೀ ಹೆಚ್ಚು ತೆಂಗು ಬೆಳೆಗಾರರಿರುವ ಜಿಲ್ಲೆಯಾಗಿದ್ದು, ಇದೇ ಜ.20 ರಿಂದ ನಫೆಡ್ ಮೂಲಕ ಕೊಬ್ಬರಿ ಖರೀದಿ ಆರಂಭ ಹಿನ್ನಲೆ 250 ರೂ ಹೆಚ್ಚಳ ಮಾಡಿ 12000 ಸಾವಿರಕ್ಕೆ ಕೊಬ್ಬರಿ ಖರೀದಿ ಮಾಡುವಂತೆ ಹಾಗೂ ಹೆಚ್ಚುವರಿ 3 ಸಾವಿರ ರಾಜ್ಯ ಸರ್ಕಾರ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ.