ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ : ತಾಲ್ಲೂಕಿನ ತಿಪ್ಪೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಕುರ್ಚಿಯಲ್ಲಿ ಸಾರ್ವಜನಿಕರೊಬ್ಬರು ಕುಳಿತು, ಮೋಜು ಮಾಡಿದಲ್ಲದೆ ವಿಡಿಯೋ ಚಿತ್ರೀಕರಣ ಮಾಡಿ ಕೊಂಡು ತನ್ನ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು ಈ ಸಂಬಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದೇ ಇರುವುದು ಅನುಮಾನ ಮೂಡಿಸಿದೆ ಎಂದು ತಿಪ್ಲೂರು ಗ್ರಾಮ ಪಂಚಾಯತಿ ಸದಸ್ಯರಾದ ಪಿ.ರಾಮಕೃಷ್ಣೇಗೌಡ ಹಾಗೂ ಟಿ.ಎನ್.ಸತ್ಯನಾರಾಯಣ ತಿಳಿಸಿದರು.
ಕೆ.ಆರ್.ನಗರ ಪತ್ರಕರ್ತರ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರೇ ಆಗಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಹುದ್ದೆ ಮುಖ್ಯಮಂತ್ರಿಗಳ ಹುದ್ದೆಗೂ ಜಾಸ್ತಿ, ಏಕೆಂದರೆ ಅಧ್ಯಕ್ಷರಾದವರು ಚೆಕ್‌ಗೆ ಸಹಿ ಮಾಡಬಹುದು ಆದ್ದರಿಂದ ಇಂತಹ ಅಧ್ಯಕ್ಷರ ಕುರ್ಚಿಯಲ್ಲಿ ಯಾರೊಬ್ಬರು ಕುಳಿತು ಕೊಳ್ಳುವುದಿಲ್ಲ, ಅಂತಹದರಲ್ಲಿ ತಿಪ್ಪೂರು ಗ್ರಾಮದ ಮಹೇಶ್ ನಾಯಕ ಎಂಬ ವ್ಯಕ್ತಿ ಏಕಾಏಕಿ ಅಧ್ಯಕ್ಷ ಕೊಠಡಿಗೆ ತೆರಳಿ ಕುರ್ಚಿಯ ಮೇಲೆ ಕುಳಿತಿದ್ದಲ್ಲದೆ ಪೋಟೋ, ವಿಡಿಯೋ ಮಾಡಿ ಕೊಂಡು ತನ್ನ ಮೊಬೈಲ್ ನ ಸ್ಟೇಟಸ್ಸ್ ಮತ್ತು ಸಾಮಾಜಿಕ ಜಾಲತಾಣ ಹಾಕಿ ಅಧ್ಯಕ್ಷರ ಕುರ್ಚಿಗೆ ಅಪಮಾನ ಮಾಡಿದ್ದಾನೆ, ಗ್ರಾಮದಲ್ಲಿ ಸಾರ್ವಜನಿಕರು ನಾವು ಒಂದು ದಿನ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಕೊಳ್ಳುತ್ತೇವೆ ಎಷ್ಟು ಹಣ ಕೊಡ ಬೇಕು ಹೇಳಿ ಎಂದು ಚರ್ಚೆ ಮಾಡುತ್ತಿದ್ದಾರೆ,
ಈ ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಂಚಾಯತಿ ಪಿಡಿಓ ಧನಂಜಯ ಅವರಿಗೆ ಎಷ್ಟು ಬಾರಿ ಹೇಳಿದರು ಕ್ರಮ ವಹಿಸದೇ ಅಸಡ್ಡೆ ತೋರುತ್ತಿದ್ದಾರೆ, ಈ ಬಗ್ಗೆ ತಾ.ಪಂ.ಇಓ ಅವರ ಗಮನಕ್ಕೆ ತರಲಾಗಿ ಬೇಟಿ ನೀಡಿ ಮಾಹಿತಿ ಪಡೆಯಲಾಗಿದೆ, ಇದುವರೆವಿಗೂ ದೂರು ದಾಖಲಾಗಿಲ್ಲ, ಚುನಾಯಿತ ಪ್ರತಿನಿಧಿಗಳ ಬಗ್ಗೆ ಇಷ್ಟೊಂದು ತಾತ್ಸರ ಬೇಡ, ಕ್ರಮ ವಹಿಸದಿದ್ದಲ್ಲಿ ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರ ಎದುರಿನಲ್ಲಿ ಸಾರ್ವಜನಿಕರೊಡನೇ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.