Saturday, April 19, 2025
Google search engine

Homeರಾಜ್ಯಡೇಂಘಿ ಹರಡಿದ ಡೋಂಗಿ ಸರ್ಕಾರ: ನಗರಸಭೆ ಆವರಣದಲ್ಲಿ ಸೊಳ್ಳೆ ಕ್ರಿಮಿನಾಶಕ ಸಿಂಪಡಿಸಿ ಬಿಜೆಪಿ ವಿಭಿನ್ನ ಪ್ರತಿಭಟನೆ

ಡೇಂಘಿ ಹರಡಿದ ಡೋಂಗಿ ಸರ್ಕಾರ: ನಗರಸಭೆ ಆವರಣದಲ್ಲಿ ಸೊಳ್ಳೆ ಕ್ರಿಮಿನಾಶಕ ಸಿಂಪಡಿಸಿ ಬಿಜೆಪಿ ವಿಭಿನ್ನ ಪ್ರತಿಭಟನೆ

ಮಂಡ್ಯ: ಡೇಂಘಿ ಹರಡಿದ ಡೋಂಗಿ ಸರ್ಕಾರ ಎಂದು ವ್ಯಂಗ್ಯವಾಡಿ ಕೈಗೆ ಗ್ಲೌಸ್, ಮಾಸ್ಕ್, ಹಾಗೂ ಸೊಳ್ಳೆಪರದೆ ಹಾಕಿಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಮಂಡ್ಯದ ನಗರಸಭೆ ಆವರಣದಲ್ಲಿ  ಡೇಂಘಿ ನಿಯಂತ್ರಣದ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಡೇಂಘಿ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸೊಳ್ಳೆಗಳಿಂದ ಕಚ್ಚಿಸಿಕೊಂಡು ಜನರು ಸಾಯುವ ಪರಿಸ್ಥಿತಿ ಬಂದಿದೆ. ಯಾವ ರಾಜ್ಯದಲ್ಲೂ ನಡೆಯದಂತ ದುರಂತ ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ. ಸರ್ಕಾರದ ಐದು ಸುಳ್ಳಿನ ಗ್ಯಾರಂಟಿ ಜೊತೆಗೆ ಜನರ ಸಾವಿನ ಗ್ಯಾರಂಟಿ ಘೋಷಿಸದೆ ಸತ್ಯವಾಗಿ ಜಾರಿಗೆ ತಂದಿದ್ದಾರೆ. ಡೇಂಘಿ ನಿಯಂತ್ರಣಕ್ಕೆ ಸೂಕ್ತ ಚಿಕಿತ್ಸೆ ಒದಗಿಸದೆ ಕಾಂಗ್ರೆಸ್ ಸರ್ಕಾರ ಡೋಂಗಿಯಾಗಿದೆ. ತಕ್ಷಣವೇ ಡೇಂಘಿ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಆರೋಗ್ಯ ಮಂತ್ರಿ ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

RELATED ARTICLES
- Advertisment -
Google search engine

Most Popular