ವರದಿ ಎಡತೊರೆ ಮಹೇಶ್
ಹೆಚ್.ಡಿ.ಕೋಟೆ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹೆಚ್.ಡಿ. ಕೋಟೆ. ಇವರ ಸಹಯೋಗದೊಂದಿಗೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯ ಕ್ರಮದ ಅಡಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ವಿರೋಧಿ ಕಾರ್ಯ ಕ್ರಮದ ಅಂಗವಾಗಿ ಹೆಚ್.ಡಿ.ಕೋಟೆ ಮತ್ತು ಸರಗೂರು,ತಾಲ್ಲೂಕಿನ ಎಲ್ಲಾ ಶಾಲೆಯ ವಿಜ್ಞಾನ ಶಿಕ್ಷಕರಿಗೆ ಡೆಂಗ್ಯೂ ರೋಗದ ಬಗ್ಗೆ ಅಡ್ವಕೇಸಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯ ಕ್ರಮದಲ್ಲಿ , ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ” ಸುವರ್ಣ,
ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ” ಟಿ.ರವಿಕುಮಾರ್ ,ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ”ಸೋಮಣ್ಣ ರವರು ಅಧ್ಯಕ್ಷತೆಯನ್ನು ವಹಿಸಿ, ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಗಳು ಮಾತನಾಡಿ ,ರಾಷ್ಟ್ರೀಯ ಡೆಂಗ್ಯೂ ದಿನ ವನ್ನು ಮೇ ತಿಂಗಳಲ್ಲಿ ಯಾಕೇ ಆಚರಣೆ ಮಾಡುತ್ತೀವಿ ಎಂದರೆ, ಮೇ ತಿಂಗಳಲ್ಲಿ ಹೆಚ್ಚಾಗಿ ಮಳೆ ಬರುವುದರಿಂದ ಸೊಳ್ಳೆಗಳು ಹೆಚ್ಚು ಉತ್ಪತ್ತಿ ಯಾಗುತ್ತದೆ.ಎಂದು ತಿಳಿಸಿದರು. ಡೆಂಗ್ಯೂ ಒಂದು ಮಾರಕ ಕಾಯಿಲೆ ,ಡೆಂಗ್ಯೂ ಮತ್ತು ಚಿಕುಂಗುನ್ಯಾ ಕಾಯಿಲೆಯು ಈಡಿಸ್ ಈಜಿಪ್ಟ್ ಎಂಬ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಈ ರೋಗವು ಹರಡುತ್ತದೆ, ಈ ಸೊಳ್ಳೆಯು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ.ಎಂದು ತಿಳಿಸಿದರು.
ಈ ರೋಗದ ಮುಖ್ಯ ಲಕ್ಷಣಗಳು. ತೀವ್ರ ಜ್ವರ, ವಿಪರೀತ ತಲೆನೋವು ಕಣ್ಣುಗುಡ್ಡೆ ಹಿಂಭಾಗದಲ್ಲಿ ವಿಪರೀತನೋವು, ಮಾಂಸ ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳುತ್ತದೆ ಎಂದು ತಿಳಿಸಿದರು. ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ . ಈ ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು,ಈ ಸೊಳ್ಳೆಗಳ ನಿಯಂತ್ರಣ ದಿಂದ ಡೆಂಗ್ಯೂ ರೋಗದ ಹತೋಟಿ ಸಾಧ್ಯ, ಈ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಅಂದರೆ ಮನೆಯ ಒಳಗೆ ಹಾಗೂ ಹೊರಗೆ ನೀರು ಶೇಖರಿಸುವ ತೊಟ್ಟಿ, ಮಣ್ಣಿನ ಮಡಿಕೆ, ಉಪಯೋಗಿಸಿದ ಬರಳು ಕಲ್ಲುಗಳು, ತಟ್ಟೆಗಳು, ಪೇಪರ್ ಲೋಟಗಳು, ಬಳಸಿದ ಟೈರುಗಳು,ಎಳ ನೀರು ಚಿಪ್ಪುಗಳು, ಘನ ತ್ಯಾಜ್ಯ ವಸ್ತುಗಳಲ್ಲಿ, ವಾಸಿಸುತ್ತವೆ, ಆದುದರಿಂದ ನೀರು ನಿಲ್ಲದಂತೆ ಎಚ್ಚರಿಸಬೇಕು ಎಂದರು,
ಮುಂಜಾಗ್ರತ ಕ್ರಮಗಳು: ಎಲ್ಲಾ ನೀರಿನ ತೊಟ್ಟಿಗಳು, ಡ್ರಮ್ ಗಳು, ಬ್ಯಾರೆಲ್ ಗಳು, ಏರ್ ಕೂಲರ್ ಗಳು, ಇತ್ಯಾದಿಗಳನ್ನು ವಾರಕ್ಕೆ ಒಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ನೀರು ಭರ್ತಿ ಮಾಡಿಕೊಳ್ಳಬೇಕು, ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರು ಚಿಪ್ಪು, ಮರದ ಪೂಟ್ಟರೆ ,ಒಡೆದ ಬಾಟಲು, ಕುಡಿದು ಬಿಸಡಿದ ಪ್ಲಾಸ್ಟಿಕ್ ಲೋಟ , ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿ ಸೂಕ್ತ ವಿಲೇವಾರಿ ಮಾಡಬೇಕು.ಎಂದು ತಿಳಿಸಿದರು.
ಸ್ವಯಂರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆ ಬಳಸುವುದು, ಮೈತುಂಬ ಬಟ್ಟೆ ಧರಿಸುವುದು, ಆರೋಗ್ಯ ಇಲಾಖೆ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಯೋಜಕರಾದ ಪುರುಷೋತ್ತಮ್ , ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಾದ ಡಾ” ಅಶ್ರಿತ್ ಶೆಟ್ಟಿ,ಡಾ” ಚಂದ್ರ ಕಲಾ,ಡಾ” ಕೀರ್ತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ,ಜಯ ರಾಮ್,ನಾಗೇಂದ್ರ,ರವಿರಾಜ್,ಅಶೋಕ್,ಅರಲಪ್ಪ ,, ಸಮುದಾಯ ಆರೋಗ್ಯ ಅಧಿಕಾರಿಗಳು, ಶಾಲೆಯ ಶಿಕ್ಷಕರು, ಇನ್ನಿತರರು ಹಾಜರಿದ್ದರು.