Sunday, April 20, 2025
Google search engine

Homeಸ್ಥಳೀಯಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಣೆ: ಜಿಲ್ಲಾಡಳಿತಕ್ಕೆ ಪ್ರತಾಪ್ ಸಿಂಹ ಅಭಿನಂದನೆ

ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಣೆ: ಜಿಲ್ಲಾಡಳಿತಕ್ಕೆ ಪ್ರತಾಪ್ ಸಿಂಹ ಅಭಿನಂದನೆ

ಮೈಸೂರು: ಮಹಿಷಾ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಎರಡು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಸಂಸದ ಪ್ರತಾಪ್​ ಸಿಂಹ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಮೈಸೂರಿನಲ್ಲಿ ಮುಂದುವರೆದ ಮಹಿಷಾ ದಸರಾ ಹಾಗೂ ಚಾಮುಂಡಿ ಚಲೋ ಜಟಾಪಟಿ ಕುರಿತು ಫೇಸ್​ಬುಕ್​ ಲೈವ್​ನ ಲ್ಲಿ ಮಾತನಾಡಿರುವ ಪ್ರತಾಪ್​ ಸಿಂಹ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಹಿಷಾ ದಸರಾ ಮತ್ತು ಚಾಮುಂಡಿ ಬೆಟ್ಟ ಚಲೋ ಆಚರಣೆಗೆ ಅನುಮತಿ ಕೊಟ್ಟಿಲ್ಲ. ಜಿಲ್ಲಾಡಳಿತದ ಈ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ ಎಂದರು.

ನಮ್ಮ ಉದ್ದೇಶ ಮಹಿಷಾ ದಸರಾ ಎಂಬ ಅಸಹ್ಯ, ಅನಾಚಾರವನ್ನು ತಡೆಯುವುದಷ್ಟೇ. ನಮ್ಮ ಸರ್ಕಾರವಿದ್ದಾಗ ಮಹಿಷಾ ದಸರಾ ಮಾಡಲಿಕ್ಕೆ ಬಿಟ್ಟಿರಲಿಲ್ಲ. ಒಂದು ವೇಳೆ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅನುಮತಿ ಕೊಟ್ಟರೆ ಅಕ್ಟೋಬರ್​​ 15ರಂದು ನಡೆಯಲಿರುವ ದಸರಾ ಉದ್ಘಾಟನೆ ವೇಳೆ ನಾನು ಇದನ್ನು ಪ್ರಶ್ನೆ ಮಾಡುತ್ತೇನೆ ಎಂದು ಕಿಡಿಕಾರಿದರು.

ಮಹಿಷನನ್ನ ದೇವರು ಮಾಡಲು ಹೊರಟಿದ್ದಾರೆ. ಮಹಿಷಾ ಬೌದ್ದ ಬಿಕ್ಕು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಮಹಿಷಾನನ್ನು ದೇವರು ಮಾಡಿ ಚಾಮುಂಡಿ ತಾಯಿಯನ್ನು ಅವಮಾನಿಸುವುದು ಇವರ ಕೆಲಸ ಎಂದು ಆಕ್ರೋಶ ಹೊರಹಾಕಿದರು.

RELATED ARTICLES
- Advertisment -
Google search engine

Most Popular