Tuesday, April 22, 2025
Google search engine

Homeರಾಜ್ಯಸುದ್ದಿಜಾಲಜನಸ್ಪಂದನ ಕಾರ್ಯಕ್ರಮದ ಸದುಪಯೋಗಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ

ಜನಸ್ಪಂದನ ಕಾರ್ಯಕ್ರಮದ ಸದುಪಯೋಗಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ

ರಾಮನಗರ: ಉದ್ಯೋಗ, ಶಿಕ್ಷಣಕ್ಕಾಗಿ ಇಲ್ಲಿನಗ್ರಾಮಸ್ಥರು ಗುಳೆ ಹೋಗುವುದನ್ನುತಡೆಗಟ್ಟುವ ನಿಟ್ಟಿನಲ್ಲಿಜನರಿಗೆಉದ್ಯೋಗ ಹಾಗೂ ಗ್ರಾಮಗಳಲ್ಲಿಯೇ ಸುಸಜ್ಜಿತ ಮಾದರಿ ಶಾಲೆಗಳನ್ನು ನಿರ್ಮಿಸಿ ಮಕ್ಕಳಿಗೆಗುಣಮಟ್ಟದ ಶಿಕ್ಷಣ ಕೊಡಿಸಲುರಾಜ್ಯ ಸರ್ಕಾರದಿಂದ ಕ್ರಮವಹಿಸಲಾಗಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಅವರುಜೂ.೨೪ರ ಸೋಮವಾರ ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ ಪಬ್ಲಿಕ್ ಶಾಲೆಗಳನ್ನು ತೆರೆಯಲು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ, ಅದರಂತೆ ಉತ್ತಮ ಶಾಲೆಗಳು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿವೆ ಎಂದ ಅವರು, ಇಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗುವುದು ಹಾಗೂ ಅವುಗಳ ವಿಲೇಗೆ ಅನುಕೂಲವಾಗುವಂತೆ ತಾಲೂಕು ಕಚೇರಿಯಲ್ಲಿ ಪ್ರತ್ಯೇಕವಾದ ಕೌಂಟರ್‌ ಅವನ್ನುತೆರೆಯಲಾಗುವುದು ಎಂದರು.

ಕೋಡಂಬಳ್ಳಿ ಗ್ರಾಮದ ಬಿಸಲಮ್ಮನದೇವಸ್ಥಾನದಗರ್ಭದಗುಡಿ ಸೋರುತ್ತಿರುವುದು ಕಂಡುಬಂದಿದೆ.ಇದನ್ನುಸರಿಪಡಿಸಿ, ಈ ದೇವಸ್ಥಾನಕ್ಕೆ ಅಗತ್ಯವಿರುವ ಭವನವೊಂದನ್ನು ನಿರ್ಮಿಸಿಕೊಡುವ ಭರವಸೆ ನೀಡಿದಅವರು, ಈ ಭಾಗದಲ್ಲಿಸಕ್ಕರೆಕಾರ್ಖಾನೆಯು ಸರಿಯಾಗಿಜನರಿಗೆ ಉಪಯೋಗವಾಗುತ್ತಿಲ್ಲಎಂದುಗ್ರಾಮದಜನರು ಮನವಿ ಮಾಡಿದ್ದಾರೆ.ಇದನ್ನುಕೂಡಲೇ ಸರಿಪಡಿಸಲಾಗುವುದು ಎಂದು ಹೇಳಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ, ಆದಾಗ್ಯೂ ಕೆಲವೊಂದು ಸಮಸ್ಯೆಗಳು ಕಂಡಬಂದಲ್ಲಿ ಇಂದಿನ ಜನಸ್ಪಂದನಕಾರ್ಯಕ್ರಮದಲ್ಲಿ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು, ಸಾರ್ವಜನಿಕರುಜನಸ್ಪಂದನಕಾರ್ಯಕ್ರಮದಲ್ಲಿತಮ್ಮ ಅಹವಾಲುಗಳನ್ನು ಸಲ್ಲಿಸಿ, ಅದಕ್ಕೆ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು. ಸ್ವೀಕೃತವಾದ ಕುಂದುಕೊರತೆಯಅರ್ಜಿಗೆಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿಪರಿಹಾರ ಕಲ್ಪಿಸಿಕೊಡುತ್ತಾರೆ.ಜಿಲ್ಲಾ ಮಟ್ಟದಲ್ಲಿ ಪರಿಹಾರ ನೀಡಲು ಸಾಧ್ಯವಾಗದೇಇದ್ದಾಗಅದನ್ನುರಾಜ್ಯ ಮಟ್ಟದಲ್ಲಿ ಚರ್ಚಿಸಿ, ಅವುಗಳಿಗೆ ಪರಿಹಾರ ನೀಡುವಯತ್ನ ಮಾಡುತ್ತಾರೆ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.


ಸಾರಿಗೆ, ಮುಜರಾಯಿ ಹಾಗೂ ರಾಮನಗರಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಚನ್ನಪಟ್ಟಣ ತಾಲೂಕಿನ ಈ ಭಾಗದಲ್ಲಿ ಸುಮಾರು ೧೨,೦೦೦ ಜನರಿಗೆ ಜನಸ್ಪಂದನ ಕಾರ್ಯಕ್ರಮದ ಉದ್ದೇಶವನ್ನು ಮನೆಮನೆಗೆ ತಲುಪಿಸಲಾಗಿದೆ.ನಿವೇಶನ ಇಲ್ಲದವರು ಸಹ ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿ ನೀಡಬಹುದು.ಪಡಿತರ ಚೀಟಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ದೇವಸ್ಥಾನಜೀರ್ಣೋದ್ಧಾರ, ಕಂದಾಯ, ಸರ್ಕಾರದಗ್ಯಾರಂಟಿ ಯೋಜನೆಗಳು, ಇ-ಖಾತೆ ಸಮಸ್ಯೆ ಸೇರಿದಂತೆಇತರೆ ಸಮಸ್ಯೆಗಳ ಕುರಿತುಅರ್ಜಿ ಸಲ್ಲಿಸಿದ್ದಲ್ಲಿ, ಸಮಸ್ಯೆಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡುತ್ತಾರೆ.ಸಾರ್ವಜನಿಕರು ಈ ಜನಸ್ಪಂದನ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದಎಸ್.ರವಿ,ಜಿಲ್ಲಾಧಿಕಾರಿಡಾ. ಅವಿನಾಶ್ ಮೆನನ್‌ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರ್ತಿಕ್‌ ರೆಡ್ಡಿ,ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭವ್ಯ, ಜೆ.ಬ್ಯಾಡರಹಳ್ಳೀ ಗ್ರಾಮ ಪಂಚಾಯತ್‌ಅಧ್ಯಕ್ಷರಾದ ಪೂರ್ಣಿಮಾ, ಕೋಡಂಬಳ್ಳಿ ಗ್ರಾಮ ಪಂಚಾಯತ್‌ಉಪಾಧ್ಯಕ್ಷರಾದ ಪರ್ವಿನ್‌ತಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರೆಗಣ್ಯರು ವೇದಿಕೆಯಲ್ಲಿದ್ದರು.
ಅಪರಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸ್ವಾಗತಿಸಿದರು.

ಅಗಾಧ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ನೂರಾರು ಅಹವಾಲುಗಳು ಸಲ್ಲಿಕೆಯಾದವು.ಅದಕ್ಕಾಗಿ ೨೫ ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಿದ್ದು ವಿಶೇಷವಾಗಿತ್ತು.ಅಲ್ಲಿಅಹವಾಲುಗಳನ್ನು ಸ್ವೀಕರಿಸುವುದು ಹಾಗೂ ಅಹವಾಲುಗಳನ್ನು ಸಿದ್ದಪಡಿಸಿಕೊಳ್ಳಲು ನೆರವು ನೀಡಲಾಗುತ್ತಿತ್ತು.

RELATED ARTICLES
- Advertisment -
Google search engine

Most Popular