ಕೆ.ಆರ್.ನಗರ: ರೈತರ ಬಗ್ಗೆ ಅವಹೇಳನ ಮಾಡಿರುವ ಸಕ್ಕರೆ ಮತ್ತು ಕೃಷಿ ಸಚಿವ ಶಿವಾನಂದ ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ಉಚ್ಛಾಟನೆ ಮಾಡಬೇಕು ಎಂದು ತಾಲೂಕು ರೈತ ಸಂಘ ಒತ್ತಾಯ ಮಾಡಿ ಎಂದು ಸರ್ಕಾರಕ್ಕೆ ತಾಲೂಕು ರೈತ ಸಂಘ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ಸಾಲಿಗ್ರಾಮ ತಾಲೂಕು ಆಡಳಿತ ಕಛೇರಿಯ ಶಿರಸ್ಡೆದಾರ್ ಶಿವಕುಮಾರ್ ರವರಿಗೆ ತಾಲೂಕಿನಲ್ಲಿರುವ ರೈತ ಸಂಘದ ಅಧ್ಯಕ್ಷ ಎಸ್ ಬಿ ಶೇಖರ್ ರವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ರವರು ರೈತ ಸಮುದಾಯವನ್ನು ಅತ್ಯಂತ ಕೀಳಾಗಿ ಬಿಂಬಿಸಿ, ಅವಹೇಳನ ಮಾಡಿರುತ್ತಾರೆ. ಇವರನ್ನು ಸರ್ಕಾರ ಸಚಿವ ಸ್ಥಾನದಿಂದ ಉಚ್ಚಾಟನೆ ಮಾಡಬೇಕೆಂದು ಒತ್ತಾಯ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸಾಲಿಗ್ರಾಮ ತಾಲೂಕು ಅಧ್ಯಕ್ಷ ಎಸ್ ಬಿ ಶೇಖರ್, ಮಾವನೂರು ಘಟಕ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ದೀಪು, ಪಶುಪತಿ ರೈತ ಘಟಕ ಅಧ್ಯಕ್ಷ ಸೋಮಶೇಖರಯ್ಯ, ಕಾರ್ಯದರ್ಶಿ ಸುರೇಶ್, ಮೇಲೂರು ಯುವ ಘಟಕ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಮಂಜಣ್ಣ ಸೇರಿದಂತೆ ತಾಲೂಕು ರೈತ ಸಂಘ ಹಾಗೂ ತಾಲೂಕು ಯುವ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಗಳು ಇನ್ನಿತರರು ಇದ್ದರು.