Friday, April 11, 2025
Google search engine

Homeಸಿನಿಮಾಟೀಕೆಯ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಬಂಗಾರದ ಬೆಳೆ ತೆಗೆದ ‘ಆದಿಪುರುಷ್’

ಟೀಕೆಯ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಬಂಗಾರದ ಬೆಳೆ ತೆಗೆದ ‘ಆದಿಪುರುಷ್’

ಪ್ರಭಾಸ್ ಹಾಗೂ ಕೃತಿ ಸನೋನ್​ ನಟನೆಯ ‘ಆದಿಪುರುಷ್’ ಸಿನಿಮಾ ಬಗ್ಗೆ ಕೇಳಿ ಬಂದ ಟೀಕೆಗಳು ಒಂದೆರಡಲ್ಲ. ಈ ಚಿತ್ರಕ್ಕೆ ಸಾಕಷ್ಟು ನೆಗೆಟಿವ್ ಕಮೆಂಟ್ ​ಗಳು ಬಂದವು.

ಈ ಚಿತ್ರ ಐಎಂಡಿಬಿಯಲ್ಲಿ ಕಡಿಮೆ ರೇಟಿಂಗ್ ಪಡೆದಿದೆ. ಆದರೆ, ಚಿತ್ರ ಮೊದಲ ದಿನ ‘ಆದಿಪುರುಷ್’ ಬಾಕ್ಸ್ ಆಫೀಸ್ ​ನಲ್ಲಿ ಬಂಗಾರದ ಬೆಳೆ ತೆಗೆದಿದೆ. ವಿಶ್ವಾದ್ಯಂತ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ 250 ಕೋಟಿ ರೂಪಾಯಿ ದಾಟಿದೆ ಎಂದು ವರದಿ ಆಗಿದೆ. ಈ ಮೂಲಕ ಒಳ್ಳೆಯ ಓಪನಿಂಗ್ ಪಡೆದಿದೆ.

ಒಳ್ಳೆಯ ಓಪನಿಂಗ್ ಪಡೆಯಲೇಬೇಕಾದ ಅನಿವಾರ್ಯತೆ ಬಿಗ್ ಬಜೆಟ್ ಚಿತ್ರಗಳಿಗೆ ಇರುತ್ತದೆ. ಹಾಗಾದರೆ ಮಾತ್ರ ನಿರ್ಮಾಪಕರು ಲಾಭ ಕಾಣುತ್ತಾರೆ. ಅದೇ ರೀತಿಯಲ್ಲಿ ‘ಆದಿಪುರುಷ್’ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಜೂನ್ 16ರಂದು ರಿಲೀಸ್ ಈ ಚಿತ್ರ ಇಂದು (ಜೂನ್17) ಹಾಗೂ ನಾಳೆ (ಜೂನ್ 18) ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

ಹಿಂದಿ, ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ‘ಆದಿಪುರುಷ್’ ರಿಲೀಸ್ ಆಗಿದೆ. ಭಾರತದಲ್ಲಿ ಈ ಚಿತ್ರ 110-112 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿ ವರ್ಷನ್​ನ ಒಂದರಲ್ಲೇ ಈ ಚಿತ್ರದ ಗಳಿಕೆ 36-38 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಈ ಚಿತ್ರ 150 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಏರಿಕೆ ಆಗಬಹುದು.

ಇಂಟರ್ನೆಟ್ ಮೂವೀ ಡೇಟಾಬೇಸ್ ​ನಲ್ಲಿ (ಐಎಂಡಿಬಿ) ‘ಆದಿಪುರುಷ್’ ಚಿತ್ರಕ್ಕೆ ಕಡಿಮೆ ರೇಟಿಂಗ್ ಸಿಕ್ಕಿದೆ. ಈ ಸಿನಿಮಾ ಸದ್ಯ 2.9 ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಸಿನಿಮಾಗೆ ಅತೀ ಕಡಿಮೆ ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರೇಟಿಂಗ್ ಹೆಚ್ಚಬಹುದು ಅನ್ನೋದು ಅಭಿಮಾನಿಗಳ ನಂಬಿಕೆ. ಐಎಂಡಿಬಿಗೆ ಹೋಲಿಕೆ ಮಾಡಿದರೆ ಬುಕ್ ಮೈ ಶೋನಲ್ಲಿ ‘ಆದಿಪುರುಷ್’ ರೇಟಿಂಗ್ ಕೊಂಚ ಉತ್ತಮವಾಗಿದೆ. ಈವರೆಗೆ 81 ಸಾವಿರ ಮಂದಿ ರೇಟಿಂಗ್ ನೀಡಿದ್ದು, 10ಕ್ಕೆ 7.4 ರೇಟಿಂಗ್ ಪಡೆದಿದೆ. ಈ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಇದೆ.

RELATED ARTICLES
- Advertisment -
Google search engine

Most Popular