ಮೈಸೂರು : ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಅಮಾನತ್ತುಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನಿಯಮಾನುಸಾರ ನಾಶಪಡಿಸಲಾಯಿತು.
ಜಯಪುರ ಹೋಬಳಿ ಗುಜ್ಜೇಗೌಡನ ಪುರದಲ್ಲಿರುವ ಮೇ.ಜಿಪ್ಸ್ ಬಯೋಟೆಕ್ ಪ್ಲಾಂಟ್‌ನಲ್ಲಿ ಡ್ರಗ್ ಡಿಸ್ಪೋಸಲ್ ಸಮಿತಿಯ ಸಮ್ಮುಖದಲ್ಲಿ ಉಪ ಪರಿಸರ ಅಧಿಕಾರಿ ಹಾಗೂ ಪಂಚಾಯ್ತುದಾರರ ಸಮಕ್ಷಮ ಪರಿಸರ ಮಾಲಿನ್ಯವಾಗದಂತೆ ಇವುಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಲಾಯಿತು.
ಮೈಸೂರು ನಗರದ ಎನ್.ಡಿ.ಪಿ.ಎಸ್. ಕಾಯ್ದೆಯ ೩೬ ಪ್ರಕರಣಗಳಲ್ಲಿ ಒಟ್ಟು ೩೭೬ ಕೆ.ಜಿ ೨೭೬ ಗ್ರಾಂ ಗಾಂಜಾ, ೫ ಪ್ರಕರಣಗಳಲ್ಲಿ ೪೯ ಗ್ರಾಂ ೨೯೮ ಮಿಲಿ ಎಂ.ಡಿ.ಎಂ.ಎ ಹಾಗೂ ೧ ಪ್ರಕರಣದಲ್ಲಿ ೨೮ ಗ್ರಾಂ ೭೪ ಮಿಲಿ ಗ್ರಾಂ ಚರಸ್ ಮಾದಕ ವಸ್ತುಗಳನ್ನು ನಾಶಪಡಿಸಲಾಗಿರುತ್ತದೆ. ಇವುಗಳ ಅಂದಾಜು ಮೌಲ್ಯ ರೂ. ೧,೫೩,೯೫,೦೦೦/- ಆಗಿರುತ್ತದೆ.
ಮೇಲ್ಕಂಡಂತೆ ಮಾದಕ ವಸ್ತುಗಳನ್ನು ನಾಶಪಡಿಸುವ ಸಮಯದಲ್ಲಿ ಮೈಸೂರು ನಗರ ಡ್ರಗ್ ಡಿಸ್ಪೋಸಲ್ ಸಮಿತಿಯ ಛೇರ್‌ಮನ್ ಡಿಸಿಪಿ ಎಸ್. ಜಾಹ್ನವಿ, ಅಪರಾಧ ಮತ್ತು ಸಂಚಾರ ಹಾಗೂ ಸಮಿತಿಯ ಸದಸ್ಯರಾದ ಎಸಿಪಿ ಎಸ್.ಎನ್. ಸಂದೇಶ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್, ಸಿ.ಸಿ.ಆರ್.ಬಿ. ಘಟಕ, ನಿಂಗಪ್ಪ, ಉಪ ತಹಶೀಲ್ದಾರ್ ಉಪ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮೈಸೂರು ಹಾಗೂ ಇತರೇ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.