ವರದಿ: ಸ್ಟೀಫನ್ ಜೇಮ್ಸ್.
ಬೆಳಗಾವಿ: ಅಬಕಾರಿ ಇಲಾಖೆಯ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ ಕಾಯಿದೆಯಡಿ ವಶಪಡಿಸಿಕೊಳ್ಳಲಾದ ಹಾಗೂ ಪೊಲೀಸ್ ಇಲಾಖೆಯಿಂದ ಹಸ್ತಾಂತರಗೊಂಡ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ತಾಲೂಕಿನ ನಾವಗೆ ಗ್ರಾಮದ ಜಾಂಬೋಟಿ ರಸ್ತೆಯಲ್ಲಿನ ಎಸ್‌ವಿಪಿ ಕೆಮಿಕ್ಸಲ್ಸ್ ಕಂಪನಿಯಲ್ಲಿ ಮಂಗಳವಾರ ನಿಯಮಾನುಸಾರವಾಗಿ ನಾಶಪಡಿಸಲಾಗಿದೆ.

ಒಟ್ಟು 65 ಪ್ರಕರಣಗಳಲ್ಲಿನ 1213ಕೆಜಿ 146ಗ್ರಾಂ. ಗಾಂಜಾ, 101 ಗಾಂಜಾ ಗಿಡಗಳು, 37 ಕೆಜಿ 100ಗ್ರಾಂ ಗಸಗಸೆ ಬೀಜ, 13 ಗಸಗಸೆ ಸ್ಮಾ ಸಾಚೆಟ್, 50 ಕೆಜಿ 414 ಗ್ರಾಂ. ಅಫೀಮ, 9 ಕೆಜಿ 602 ಗ್ರಾಂ. ತಂಬಾಕು, 11.56 ಕೆಜಿ ಹೆರಾಯಿನ್, 3 ಕೆಜಿ 439 ಗ್ರಾಂ. ಹಶಿಷ್ ಮುದ್ದೆಮಾಲನ್ನು ಮಂಗಳವಾರ ನಾಶಪಡಿಸಲಾಗಿದೆ.
ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 18, ಧಾರವಾಡ 10, ವಿಜಯಪುರ 34, ಬಾಗಲಕೋಟೆಯ ಜಿಲ್ಲೆಯ 3 ಪ್ರಕರಣಗಳು, ಎನ್‌ಡಿಪಿಎಸ್ ಕಾಯ್ದೆಯಲ್ಲಿ ವಶಕ್ಕೆ ಪಡೆದಿದ್ದು ಹಾಗೂ ಹಾಗೂ ಪೊಲೀಸ್ ಇಲಾಖೆಯಿಂದ ಹಸ್ತಾಂತರಗೊಂಡಿದ್ದ ಮುದ್ದೆಮಾಲು ಇದಾಗಿತ್ತು. ಅಬಕಾರಿ ಜಂಟಿ ಆಯುಕ್ತ ಎಫ್.ಎಚ್. ಚಲವಾದಿ, ಉಪ ಆಯುಕ್ತರಾದ ವನಜಾಕ್ಷಿ ಎಂ., ಸ್ವಪ್ನ ಆರ್.ಎಸ್., ರಮೇಶಕುಮಾರ ಎಚ್., ಹನುಮಂತಪ್ಪ ಭಜಂತ್ರಿ, ಮುರಳೀಧರ ಎಚ್.ಒ ನೇತೃತ್ವದಲ್ಲಿ ಈ ನಾಶಪಡಿಸುವ ಕಾರ್ಯ ಜರುಗಿದೆ.