Thursday, April 3, 2025
Google search engine

Homeಕಾಡು-ಮೇಡುಬಂಡೀಪುರದಲ್ಲಿ ‘ಪತ್ತೆದಾರಿ ಶ್ವಾನ ತರಬೇತಿ ಕೇಂದ್ರ’ ಆರಂಭ

ಬಂಡೀಪುರದಲ್ಲಿ ‘ಪತ್ತೆದಾರಿ ಶ್ವಾನ ತರಬೇತಿ ಕೇಂದ್ರ’ ಆರಂಭ

ಗುಂಡ್ಲುಪೇಟೆ: ಅರಣ್ಯ ಅಪರಾಧ ಪತ್ತೆಗೆ ಅರಣ್ಯ ಇಲಾಖೆ ವಿನೂತನ ಪ್ರಯತ್ನ ಮಾಡಿದ್ದು, ಬಂಡೀಪುರದಲ್ಲಿ ಪತ್ತೆದಾರಿ ಶ್ವಾನ ತರಬೇತಿ ಕೇಂದ್ರ ಆರಂಭಿಸಿದೆ.

ದೇಶದಲ್ಲಿ ಮೊದಲ ಬಾರಿ ಶ್ವಾನ ತರಬೇತಿ ಕೇಂದ್ರ ಬಂಡೀಪುರದಲ್ಲಿ ಆರಂಭವಾಗಿದೆ. ಶ್ವಾನ ದಳ ತರಬೇತಿ ಕೇಂದ್ರವನ್ನ ಮೈಸೂರು ವೃತ್ತದ ಸಿಎಫ್ ಡಾ.ಮಾಲತಿ ಪ್ರಿಯಾ ಉದ್ಘಾಟನೆ ಮಾಡಿದರು. ಹುಲಿ‌ ಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್, ಬಂಡಿಪುರದ ಸಿಎಫ್ಓ ಪ್ರಭಾಕರನ್,ಎಸಿಎಫ್ ನವೀನ್ ಕುಮಾರ್, ಆರ್ ಎಫ್ ಓ ಮಲ್ಲೇಶ್ ಶ್ವಾನ ದಳ ತರಬೇತಿದಾರ ಅಮೃತ್ ಶ್ರೀಧರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ರಾಜ್ಯದ 5 ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾವಲಿಗೆ ಶ್ವಾನದಳ ಬಳಸಲಾಗುತ್ತಿದ್ದು, ಬಂಡಿಪುರ ಅರಣ್ಯ ಇಲಾಖೆ ವತಿಯಿಂದ ಟ್ರ್ಯಾಕರ್ ಡಾಗ್ ಸ್ಕ್ವಾಡ್ ರಚಿಸಲಾಗಿದೆ. ಸುಮಾರು 20 ಮಂದಿ ಸಿಬ್ಬಂದಿಗಳನ್ನೊಳಗೊಂಡ 12 ಶ್ವಾನಗಳಿಗೆ ತರಬೇತಿ ಕೇಂದ್ರ ಆರಂಭಿಸಲಾಗಿದೆ

ಬೆಲ್ಜಿಯಂ ಮೆಲಿನೋಯಿಸ್ ತಳಿಯ ಶ್ವಾನ ಮರಿಗಳಿಗೆ ಸುಮಾರು 10 ತಿಂಗಳ ಕಾಲ ನುರಿತ ಸಿಬ್ಬಂದಿ ತರಬೇತಿ ನೀಡಲಿದ್ದಾರೆ. ಈ ಹಿಂದೆ ಬಂಡಿಪುರದಲ್ಲಿದ್ದ ರಾಣ ಎಂಬ ಶ್ವಾನ ತನ್ನ ಧೈರ್ಯದ ಕಾರ್ಯಾಚರಣೆಯಿಂದ ಎಲ್ಲರ ಮೆಚ್ಚುಗೆ ಪಡೆದಿತ್ತು. ಹತ್ತಾರು ಕಳ್ಳಬೇಟೆ ಪ್ರಕರಣಗಳ ಪತ್ತೆ ಹಚ್ಚಿತ್ತು.

RELATED ARTICLES
- Advertisment -
Google search engine

Most Popular