ಮಂಗಳೂರು (ದಕ್ಷಿಣ ಕನ್ನಡ) : ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಮಂಗಳೂರಿನ ಪಚ್ಚನಾಡಿಯ ಸ್ನೇಹ ದೀಪ ಆಶ್ರಮದ ವಿಶೇಷ ಮಕ್ಕಳಿಗೆ ಒಂದು ತಿಂಗಳ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಧ್ವಜಾರೋಹಣ ಗೈದ ಒಕ್ಕೂಟದ ಅಧ್ಯಕ್ಷ ಎಸ್.ಎನ್.ನೌಫಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್, ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಸಾಹಿತಿ ಹುಸೈನ್ ಕಾಟಿಪಳ್ಳ, ಅಖಿಲ ಭಾರತ ಬ್ಯಾರಿ ಪರಿಷತ್ತಿನ ಗೌರವ ಸಲಹೆಗಾರ ಡಾಕ್ಟರ್ ಸಿದ್ದೀಕ್, ಹಿರಿಯ ಕಲಾವಿದ ರಹೀಂ ಬಿ.ಸಿ.ರೋಡ್, ಸ್ನೇಹ ದೀಪ ಆಶ್ರಮದ ಸಂಸ್ಥಾಪಕಿ ತಬಸ್ಸುಂ, ಮಾಜಿ ಉಪಾಧ್ಯಕ್ಷ ಇರ್ಫಾನ್ ಕುಂದಾಪುರ ಮುಂತಾದವರು ಭಾಗವಹಿಸಿದ್ದರು.
ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಝ್ ಕಲಾಯಿ ಕಾರ್ಯಕ್ರಮ ಸಂಯೋಜಿಸಿದ್ದರು. ಸರ್ಫರಾಜ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಸಮೀರ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಮರ್ಹೂಂ ಶಪುವಾನ್ ಕೊಲ್ನಾಡ್ ಅವರ ಮನೆಯವರಿಗೆ ಕಮಿಟಿಯ ಸದಸ್ಯರಾದ ಮುಹಝ್ಝಿನ್ ಬೆಲಪು ಅವರು ಸಹಾಯಧನವನ್ನು ಅವರ ಕೈಗೆ ಹಸ್ತಾಂತರಿಸಲಾಯಿತು.
