Thursday, April 3, 2025
Google search engine

Homeಸ್ಥಳೀಯಪಾರ್ಕ್ ಅಭಿವೃದ್ಧಿ ಪಡಿಸಿ, ಪುಂಡರ ಹಾವಳಿ ತಪ್ಪಿಸಿ: ಅಧಿಕಾರಿಗಳಿಗೆ ಶಾಸಕ ಟಿ.ಎಸ್. ಶ್ರೀವತ್ಸ ಸೂಚನೆ

ಪಾರ್ಕ್ ಅಭಿವೃದ್ಧಿ ಪಡಿಸಿ, ಪುಂಡರ ಹಾವಳಿ ತಪ್ಪಿಸಿ: ಅಧಿಕಾರಿಗಳಿಗೆ ಶಾಸಕ ಟಿ.ಎಸ್. ಶ್ರೀವತ್ಸ ಸೂಚನೆ

ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ನಗರದ ವಿದ್ಯಾರಣ್ಯಪುರಣ ಭಾಗದಲ್ಲಿ ರೌಂಡ್ಸ್ ಹಾಕಿ ಸ್ಥಳೀಯರಿಂದ ಸಮಸ್ಯೆ ಆಲಿಸಿ ಪರಿಹಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾರ್ಡ್ ನಂಬರ್ 61ರ ಸುತ್ತಮುತ್ತ ವಿದ್ಯಾರಣ್ಯಪುರಂನ ಭಾಗಗಳಲ್ಲಿ ಇಂದು ಬೆಳಿಗ್ಗೆ ಶಾಸಕ ಟಿ. ಎಸ್. ಶ್ರೀವತ್ಸ ಅವರು ಅಧಿಕಾರಿಗಳೊಂದಿಗೆ ಪ್ರದಕ್ಷಿಣೆ ಹಾಕಿ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡಿದರು.

ಈ ವೇಳೆ ಶಾಸಕರ ಬಳಿ ಸಮಸ್ಯೆ ತೋಡಿಕೊಂಡ ಸ್ಥಳೀಯ ನಿವಾಸಿ ರಂಗರಾಜು, ಪಾರ್ಕಿನ ಸುತ್ತ ಗಿಡಗಳನ್ನು ಹಾಕಿಸಿಕೊಡುವುದು ಮತ್ತು ಬೆಳಗಿನ ಸಮಯದಲ್ಲಿ ಮಕ್ಕಳು ಕ್ರಿಕೆಟ್ ಆಡುವುದರ ಮೂಲಕ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಹಾಗೂ ರಾತ್ರಿಯ ಸಮಯದಲ್ಲಿ ಪುಂಡ ಹುಡುಗರುಗಳು ಮಧ್ಯಪಾನ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ನಗರಪಾಲಿಕೆಯ ವತಿಯಿಂದ ಇರುವ ಮಳಿಗೆಗಳು ಶಿಥಿಲವಾಗಿದ್ದು ಹಾಗೂ ಆ ಮಳಿಗೆಗಳು ಯಾವುದೇ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿವೆ. ಈ ಜಾಗಗಳಲ್ಲಿ ಪುಂಡ ಯುವಕರುಗಳು ಅಸಭ್ಯ ವರ್ತನೆ ತೋರುತ್ತಾರೆ. ಹೀಗಾಗಿ ಈ ಕೂಡಲೇ ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಸ್ಥಳೀಯ ನಿವಾಸಿ ಪದ್ಮಮ್ಮ ಮನವಿ ಮಾಡಿದರು. ಮನವಿ ಆಲಿಸಿದ ಶಾಸಕ ಶ್ರೀವತ್ಸ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರೆಡ್ಡಿ, ಇಂಜಿನಿಯರ್ ಚೇತನ್, ಅರೋಗ್ಯಾಧಿಕಾರಿ ಶಿವಪ್ರಸಾದ್, ಶಾಸಕರ ಅಪ್ತ ಸಹಾಯಕ ಆದಿತ್ಯ, ವಾರ್ಡ್ ಉಸ್ತುವಾರಿ ಜೋಗಿಮಂಜು, ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್, ವಾರ್ಡ್ ಅಧ್ಯಕ್ಷ ಶಿವಪ್ರಸಾದ್, ಶಿವಲಿಂಗ ಸ್ವಾಮಿ, ಕಿಶೋರ್ ,ವಾಸು, ಶ್ರೀಧರ್ ಭಟ್, ಮಹದೇವ್, ಮಂಗಳ, ಮಹದೇವಣ್ಣ, ಕಿಶೋರ್, ಪ್ರದೀಪ್, ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular