ಮಂಡ್ಯ: ಕ್ಷಣ ಕ್ಷಣಕ್ಕೂ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ನಿಮಿಷಾಂಭ ದೇಗುಲದ ಭಕ್ತರ ಸ್ನಾನ ಗೃಹ ಜಲಾವೃತವಾಗಿದೆ. ಪ್ರವಾಹದ ಹಿನ್ನೆಲೆ ಕಾವೇರಿ ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ.
ಕೆಆರ್ ಎಸ್ ಡ್ಯಾಂ ಭರ್ತಿಯಾದ ಹಿನ್ನೆಲೆ ಕಾವೇರಿ ನದಿಗೆ 74 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.
ಅಧಿಕ ನೀರು ಬಿಡುಗಡೆ ಹಿನ್ನೆಲೆ ಪ್ರಸಿದ್ಧ ನಿಮಿಷಾಂಭ ದೇವಾಲಯದ ಬಳಿ ಪ್ರವಾಹದ ಆತಂಕ ಎದುರಾಗಿದೆ.
ಮಂಡ್ಯ ಜಿಲ್ಲಾಡಳಿತದಿಂದ ಭಕ್ತರು ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ದೇವಸ್ಥಾನದ ಬಳಿಯ ಸ್ನಾನ ಘಟ್ಟಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಸ್ನಾನಘಟ್ಟದ ಬಳಿ ತೆರಳದಂತೆ ಬ್ಯಾರಿಕೆಡ್ ಗಳನ್ನ ಪೊಲೀಸರು ಹಾಕಿದ್ದಾರೆ.