Thursday, August 14, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಭಕ್ತರ ಪ್ರತಿಭಟನೆ

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಭಕ್ತರ ಪ್ರತಿಭಟನೆ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳನನ್ನು ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸುವಂತ್ತೆ ಒತ್ತಾಯಿಸಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ ಅನಾಮಿಕ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಅದರ ಮೂಲಕ ಈ ದೂರನ್ನು ಎಲ್ಲಾ ಅಯಾಮಗಳಲ್ಲಿ ತನಿಖೆ ನಡೆಸುತ್ತಿರುವುದನ್ನು ಕ್ಷೇತ್ರದ ಭಕ್ತ ವೃಂದದವರಾದ ನಾವೆಲ್ಲರೂ ಗೌರವದಿಂದ ಸ್ವಾಗತಿಸುತ್ತಿದ್ದೇವೆ. ನಡೆಯುತ್ತಿರುವ ತನಿಖೆಯು ಅರ್ಥಪೂರ್ಣ ಕೊನೆಗೊಳ್ಳಬೇಕಾಗಿದೆ. ಅನಾಮಿಕ ದೂರುದಾರರನ್ನು ಬಳಸಿಕೊಂಡು ಸಂತೋಷ್ ಶೆಟ್ಟಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶಟ್ಟಿ ತಿಮರೋಡಿ, ಜಯಂತ್. ಟಿ ಇವರ ಹಿನ್ನೆಲೆ, ಇವರಿಗಾಗುವ ಲಾಭಗಳು ಇವರಿಗೆ ಸುಳ್ಳು ಆರೋಪ ಮಾಡಲು ಯಾರು ಪ್ರಚೋದನೆ ಮಾಡುತ್ತಿದ್ದಾರೆ ಮತ್ತು ಸದರಿಯವರ ಬ್ಯಾಂಕ್ ಖಾತೆಗಳನ್ನು ತನಿಖೆಗೊಳಪಡಿಸಬೇಕು ಅಲ್ಲದೇ ಸಾಮಾಜಿಕ ಮಾದ್ಯಮದಲ್ಲಿ ತಮ್ಮ ಹತ್ತಿರ ಮೊಬೈಲ್ ನಲ್ಲಿ ಸಾಕ್ಷ್ಯಾಧಾರಗಳು ಇವೆ ಎಂದು ಘಂಟಾಘೋಷವಾಗಿ ಸಾರುತ್ತಿರುವವರ ಮೊಬೈಲ್ ಗಳನ್ನು ಇವರ ಮನೆ ಹಾಗೂ ಕಛೇರಿಗಳನ್ನು ತನಿಖೆ ಮಾಡಬೇಕು ಹಾಗೂ ಸತ್ಯಾಂಶವನ್ನು ಬಯಲಿಗೆ ಎಳೆಯಲು ಈಗಿರುವ ತನಿಖಾ ತಂಡದಿಂದ (SIT) ಅಥವಾ ಇನ್ನೊಂದು ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಬೇಕೆಂದು ಎಂದರು.

ಆದ್ದರಿಂದ್ದ ನಮ್ಮ ಪೂರ್ವಜರ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಮಂಜುನಾಥಸ್ವಾಮಿ ಹಾಗೂ ಡಾ|| ಡಿ.ವಿರೇಂದ್ರ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ರೀತಿಯ ಸುಳ್ಳು ಸುದ್ದಿಗಳು ಸಮೂಹ ಮಾಧ್ಯಮಗಳಲ್ಲಿ ಇನ್ನು ಮುಂದೆ ಪ್ರಸಾರವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ನಿರತರು ಅಗ್ರಹಿಸಿದರು.

ಕೊಡಗು ಜಿಲ್ಲೆ ಧರ್ಮಸ್ಥಳ ಭಕ್ತರ ವೇದಿಕೆ ಸಂಚಾಲಕ ಧನಂಜಯ ಮಾತನಾಡಿ ಕರ್ನಾಟಕ ಸುಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯವು ಸಹ ಒಂದು, ಈ ದೇವಾಲಕ್ಕೆ ಸರಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು, ಇದಕ್ಕೆ ದಕ್ಷಿಣ ಕಾಶಿ ಎಂದೇ ನಾಮಾಂಕಿತಗೊಂಡಿರುತ್ತದೆ. ಈ ಪುಣ್ಯ ಕ್ಷೇತ್ರಕ್ಕೆ ಕರ್ನಾಟಕ, ತಮಿಳುನಾಡು, ಕೇರಳ ಅಂದ್ರೆ ಪ್ರದೇಶ ಹಾಗೂ ಇತರೆ ರಾಜ್ಯಗಳಿಂದ ದಿನವೊಂದಕ್ಕೆ ಶ್ರೀ ಸ್ವಾಮಿಯ ದರ್ಶನ ಪಡೆಯಲು 50 ಸಾವಿರದಿಂದ 1 ಲಕ್ಷದ ವರೆಗೆ ಜನ ಬಂದು ಹೋಗುತ್ತಾರೆ.

ಈ ರೀತಿ ಧಾರ್ಮಿಕ ನಂಬಿಕೆಯುಳ್ಳ ಪುಣ್ಯಕ್ಷೇತ್ರದ ಮೇಲೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ, ತಿಮರೋಡಿ, ಸಂತೋಷ್ ಶಟ್ಟಿ, ಜಯಂತ್. ಟಿ ಮತ್ತು ಅವರ ಸಹಚರರು ಸೇರಿಕೊಂಡು ಮಂಜುನಾಥಸ್ವಾಮಿ ದೇವಾಲಯ ಹಾಗೂ ಧರ್ಮದರ್ಶಿ ಡಾ.ಡಿ. ವಿರೇಂದ್ರ ಹೆಗ್ಡೆ ವಿರುದ್ಧ ಅಪಪ್ರಚಾರವನ್ನು ಸಾಮಾಜಿಕ ಜಾಲತಾಣ ಹಾಗೂ ಕೆಲವೊಂದು ಸಮೂಹ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ. ಇವರೆಲ್ಲರೂ ಸೇರಿಕೊಂಡು ಧರ್ಮಸ್ಥಳ ದೇವಾಲಯದತ್ತ ಗುರಿಯಾಗಿಸಿಕೊಂಡು ನಿರಂತರವಾಗಿ ಸುಳ್ಳು ಅಪಪ್ರಚಾರಗಳನ್ನು ಮಾಡುತ್ತಿರುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ನಿರಂತರವಾಗಿ ಧಕ್ಕೆಯುಂಟಾಗುತ್ತಿದೆ ಮತ್ತು ಮೇಲೆ ತಿಳಿಸಿದ ವ್ಯಕ್ತಿಗಳು ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಅಲ್ಲದೆ ಅವರ ಸುಳ್ಳು ಆರೋಪಗಳಿಂದ ಧರ್ಮಸ್ಥಳದ ಭಕ್ತರಾದ ನಮಗೆ ಸಮಾಜದಲ್ಲಿ ಕೀಳಾಗಿ ಬಿಂಬಿಸುತ್ತಿರುವುದು ಸಹಿಸಲು ಅಸಾಧ್ಯವಾಗಿದೆ, ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿರುವುದು ಅಲ್ಲದೇ ಸಮಾಜ ಬಾಂಧವರಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟು ಹಾಕುತ್ತಿದ್ದಾರೆ. ಇದರಿಂದ ಮುಂದೆ ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿ ಭಂಗ ಮಾಡುವ ಸಂಭವವಿರುತ್ತದೆ ಎಂದು ದೂರಿದರು.


ಪ್ರತಿಭಟನಾ ನಿರತರು ಡಿ.ದೇವರಾಜ್ ಅರಸ್ ಭವನದಲ್ಲಿ ಜಮಾಗೊಂಡು ಪ್ರತಿಭಟನಾ ಸಭೆ ನಡೆಸಿ ಪ್ರಮುಖ ರಸ್ತೆಯಲ್ಲಿ ಧಿಕ್ಕಾರ ಕೂಗುತ್ತ ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ತಾಲ್ಲೂಕು ಅಧ್ಯಕ್ಷ ಎ.ಟಿ.ರಂಗಸ್ವಾಮಿ,ಜನ ಜಾಗೃತಿ ಜಿಲ್ಲಾ ಮುಖಂಡ ಷಣ್ಮುಖ ರಾವ್,ಕಸಪಾ ಅಧ್ಯಕ್ಷ ನವೀನ್ ಕುಮಾರ್,ಪುರಸಭೆ ಅಧ್ಯಕ್ಷ ಪ್ರಕಾಶ್ ಸಿಂಗ್,ಬಿಜೆಪಿ ಅಧ್ಯಕ್ಷ ರಾಜೇಂದ್ರ,ಮೈಮುಲ್ ನಿರ್ದೇಶಕ ಪ್ರಸನ್ನ, ಪುರಸಭೆ ಸದಸ್ಯರಾದ ಮಂಜುಳಾ ರಾಜ್, ಭಾರತಿ,ನಿರಂಜನ್,ಕೃಷ್ಣ,ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕಿ ಲಲಿತಾ,ರೋಟರಿ ರಾಜೇಗೌಡ, ಆವರ್ತಿ ಚಂದ್ರಶೇಖರ, ರೈತ ಸಂಘದ ಪಾಂಡುರಂಗ, ತಾಲ್ಲೂಕು ವ್ಯವಸ್ಥಾಪಕ ರವಿ,ನಳಿನಿ,ಪ್ರೀತಿ ಅರಸ್ ಸೇರಿದಂತ್ತೆ ಇತರರಿದ್ದರು.

RELATED ARTICLES
- Advertisment -
Google search engine

Most Popular