ಮೈಸೂರು: ಮೈಸೂರು ಮಹಾನಗರದ ಹೃದಯ ಭಾಗದಲ್ಲಿ ಕಳೆದ ನೂರು ವರ್ಷಗಳಿಗಿಂತಲೂ ಅಧಿಕ ಕಾಲ ನಾಡಿನ ಮತ್ತು ಹೊರ ರಾಜ್ಯ, ದೇಶಗಳ ಬಡವ-ಬಲ್ಲಿದ, ದೀನ-ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಸ್ಥಾಪನೆಗೊಳಿಸಿದ ಧರ್ಮಪ್ರಕಾಶ ಡಿ. ಬನುಮಯ್ಯನವರ ವಿದ್ಯಾಸಂಸ್ಥೆ ಆವರಣದಲ್ಲಿರುವ ಡಿ. ಬನುಮಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 164ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಕಕ್ಷರೂ, ಬನುಮಯ್ಯನವರ ಮೊಮ್ಮಗನೂ ಆಗಿರುವ ಡಾ. ವಿ.ಬಿ. ಜಯದೇವ, ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಪ್ರಾಂಶುಪಾಲ ಬಸವರಾಜು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾಸಂಸ್ಥೆಯ ಎಲ್ಲಾ ಅಂಗಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಹಾಗೂ ಕುಂಚಟಿಗ ಸಮಾಜದ ಕುಲ ಬಾಂಧವರು ಹಾಜರಿದ್ದರು.