ಮಂಗಳೂರು (ದಕ್ಷಿಣ ಕನ್ನಡ) : ರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಚರ್ಚೆಯ ಕೇಂದ್ರಬಿಂದುವಾಗಿರುವ ಪ್ರಕರಣದಲ್ಲಿ ಪ್ರಮುಖ ದೂರುದಾರ ಚಿನ್ನಯ್ಯ ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ಚಿನ್ನಯ್ಯನನ್ನು ಆಗಸ್ಟ್ 23 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯದ ಆದೇಶದಂತೆ ಆ ದಿನದಿಂದ ಸೆಪ್ಟೆಂಬರ್ 3ರ ವರೆಗೆ ಚಿನ್ನಯ್ಯನನ್ನು ಎಸ್.ಐ.ಟಿ ವಶದಲ್ಲಿರಿಸಲಾಗಿತ್ತು. ನಂತರ ಸೆಪ್ಟೆಂಬರ್ 3ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಲಯವು ಸೆಪ್ಟೆಂಬರ್ 6ರ ವರೆಗೆ ಎಸ್.ಐ.ಟಿ ಕಸ್ಟಡಿಯನ್ನು ವಿಸ್ತರಿಸಿತ್ತು.
ಚಿನ್ನಯ್ಯ ಪ್ರಕರಣದ ಪ್ರಮುಖ ದೂರುದಾರ ಮಾತ್ರವಲ್ಲದೆ ಸಾಕ್ಷಿಯೂ ಆಗಿದ್ದು, ತನ್ನ ಹೇಳಿಕೆ ನೀಡಲು ಬಂದಿದ್ದ ಸಂದರ್ಭದಲ್ಲಿ ತನಿಖಾಧಿಕಾರಿಗಳೆಡೆಗೆ ಕೆಲವೊಂದು ಮಹತ್ವದ ಮಾಹಿತಿ ನೀಡಿದವರಾಗಿದ್ದಾರೆ. ಇತ್ತೀಚಿನ ತನಿಖಾ ಪ್ರಗತಿಯನ್ನು ನೋಡಿ, ಎಸ್.ಐ.ಟಿ ಅವರಿಂದ ವಿಚಾರಣೆ ಬಹುತೇಕ ಪೂರ್ಣಗೊಂಡಿರುವಂತಿದೆ. ಈ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಮತ್ತೆ ಎಸ್.ಐ.ಟಿ ವಶಕ್ಕೆ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇಂದು ಚಿನ್ನಯ್ಯ ನ್ಯಾಯಾಲಯಕ್ಕೆ ಹಾಜರಾದ ಬಳಿಕ, ಅವರಿಗೆ ನ್ಯಾಯಾಂಗ ಬಂಧನ ವಿಧಿಸುವ ಸಾಧ್ಯತೆ ಹೆಚ್ಚಿನದಾಗಿದೆ. ಇದರರ್ಥ ಅವರು ಮುಂದಿನ ದಿನಗಳಲ್ಲಿ ಪೊಲೀಸರು ಅಥವಾ ಎಸ್.ಐ.ಟಿ ವಶದಲ್ಲಿಲ್ಲದೆ, ನ್ಯಾಯಾಲಯದ ಮೇಲ್ವಿಚಾರಣೆಯಡಿ ಜೈಲು ಬಂಧನಕ್ಕೆ ಒಳಪಡುವ ಸಾಧ್ಯತೆ ಇದೆ. ಇದು ತನಿಖೆ ಮುಂದುವರಿಯುವಲ್ಲಿ ಪ್ರಕ್ರಿಯಾತ್ಮಕ ಹೆಜ್ಜೆಯಾಗಬಹುದು.
ಈ ಪ್ರಕರಣವು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಧರ್ಮಸ್ಥಳದಂತಹ ಧಾರ್ಮಿಕ ಕೇಂದ್ರದಲ್ಲಿ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಆರೋಪವು ಭಯಾನಕ ಮತ್ತು ವಿಸ್ತೃತ ತನಿಖೆಗೆ ಮಾಡಿದ್ದಾರೆ. ಎಸ್.ಐ.ಟಿ ಕೂಡ ಈ ಸಂಬಂಧ ದಾಖಲೆಗಳ ಸಂಗ್ರಹ, ಸಾಕ್ಷಿಗಳ ವಿಚಾರಣೆ, ಸ್ಥಳ ಪರಿಶೀಲನೆ ಮೊದಲಾದ ಕ್ರಮಗಳನ್ನು ಕೈಗೊಂಡು ವಿಚಾರಣೆಯನ್ನು ಮುಂದುವರೆಸಿದೆ.
ಇಂದು ಹಾಜರಾಗುವ ಚಿನ್ನಯ್ಯನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ?