ಮಂಗಳೂರು: ಧರ್ಮಸ್ಥಳ ಪ್ರಕರಣ ಸಂಬಂಧ ಬಂಧಿತನಾಗಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನ ಎಸ್‌ಐಟಿ ಕಸ್ಟಡಿ ಇಂದು ಅಂತ್ಯವಾಗಿದ್ದು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ಚಿನ್ನಯ್ಯ ಕಳೆದ 11 ದಿನಗಳಿಂದ ಎಸ್‌ಐಟಿ ಕಸ್ಟಡಿಯಲ್ಲಿದ್ದು, ಇಂದು ಆತನನ್ನು ಎಸ್‌ಐಟಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಈಗಾಗಲೇ ಉಜಿರೆ, ಬೆಂಗಳೂರಿನಲ್ಲಿ ಮಹಜರು ಕಾರ್ಯ ಮುಗಿದಿದ್ದು, ಇನ್ನು ಕೂಡ ತಮಿಳುನಾಡು, ಮಂಡ್ಯದಲ್ಲಿ ಮಹಜರು ನಡೆಸಬೇಕಿದೆ.
ಇನ್ನು ಕೂಡ ಚಿನ್ನಯ್ಯ ವಾಸವಿದ್ದ ಮಂಡ್ಯ-ತಮಿಳುನಾಡು ಸ್ಥಳ ಮಹಜರು ಇನ್ನು ಕೂಡಾ ಬಾಕಿ ಇದೆ. ಅಲ್ಲದೇ ಮಹಜರಿನ ಬಳಿಕ ವಿಚಾರಣೆ ಕೂಡ ಬಾಕಿ ಇರುವ ಹಿನ್ನಲೆ ಇಂದು ನ್ಯಾಯಾಲಯದಲ್ಲಿ ಮತ್ತೆ 10-15 ದಿನಗಳ ಕಾಲ ಚಿನ್ನಯ್ಯನನ್ನು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.
ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಸ್ಥಳ ಮಹಜರು ಮಾಡಿದ್ದರು. ಮಂಗಳವಾರ ಕೂಡ ಅಧಿಕಾರಿಗಳು ಚಿನ್ನಯ್ಯನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಹೀಗಾಗಿ ಇಂದು ಆತನನ್ನು ಮತ್ತೆ ವಶಕ್ಕೆ ಪಡೆದು ಮಂಡ್ಯ-ತಮಿಳುನಾಡುಗೆ ಕರೆದುಕೊಂಡು ಹೋಗಿ, ಅಲ್ಲಿ ಮಹಜರು ನಡೆಸುವ ಸಾಧ್ಯತೆ ಇದೆ.
ಇನ್ನು ಪ್ರಕರಣ ಸಂಬಂಧ ಬುರುಡೆ ಬಿಟ್ಟಿದ್ದ ಚಿನ್ನಯ್ಯಗೆ ಸೇರಿದ ಒಂದು ಕೀ ಪ್ಯಾಡ್, ಮತ್ತೊಂದು ಆಂಡ್ರಾಯ್ಡ್ ಫೋನ್ ಅನ್ನು ಎಸ್‌ಐಟಿ ಸೀಜ್ ಮಾಡಿದೆ. ಅಲ್ಲದೇ ಸುಳ್ಳು ಹೇಳಿ ಸಿಕ್ಕಿಬೀಳುತ್ತಿರುವ ಸುಜಾತ ಭಟ್ ಬಳಿಯಲ್ಲಿದ್ದ ಒಂದು ಪೋನ್ ಕೂಡ ವಶಕ್ಕೆ ಎಸ್ಐಟಿ ಪಡಿದಿದೆ.
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ, ಸುಜಾತ ಪೋನ್ ನಲ್ಲಿ ಬುರುಡೆ ಸೀಕ್ರೇಟ್ ರಿವೀಲ್ ಮಾಡೋದಕ್ಕೆ ಎಸ್ಐಟಿ ಇಬ್ಬರ ಪೋನ್ ಸೀಜ್ ಮಾಡಿದೆ. ಇಬ್ಬರಿಂದ ಸೀಜ್ ಮಾಡಿರುವಂತ ಪೋನ್ ಗಳಿಂದ ಕಾಲ್ ಲೀಸ್ಟ್ ರಿಟ್ರೀವ್ ಮಾಡೋದಕ್ಕೆ ಎಸ್ಐಟಿ ಮುಂದಾಗಿದೆ.
ಧರ್ಮಸ್ಥಳ ಬುರುಡೆ ಪ್ರಕರಣಲ್ಲಿ ಸುಳ್ಳು ಹೆಣೆದಿದ್ದಾರೆ ಎಂಬ ಶಂಕೆಯಿಂದ ಎಸ್ಐಟಿ ತನಿಖೆ ನಡೆಸುತ್ತಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದೂರುದಾರನಾಗಿದ್ದ ಆರೋಪಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಹಿನ್ನೆಲೆ ದಾಳಿ ನಡೆಸಿತ್ತು. ಆಗ ಚಿನ್ನಯ್ಯನ ಎರಡು ಮೊಬೈಲ್ ಪತ್ತೆಯಾಗಿತ್ತು.
ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಶೋಧಕ್ಕೆ ಸರ್ಚ್ ವಾರಂಟ್ ಪಡೆದ ಎಸ್ಐಟಿ, ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ತಿಮರೋಡಿ ಮನೆಗೆ ಮಹಜರು ನಡೆಸಿ ತೀವ್ರ ಶೋಧ ನಡೆಸಿತ್ತು. ಈ ವೇಳೆ ಚಿನ್ನಯ್ಯನ ಫೋನ್, ಬಟ್ಟೆ ಬ್ಯಾಗ್ ಹಾಗೂ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆಯಲಾಗಿತ್ತು.
ಬೆಂಗಳೂರಿಗೂ ಚಿನ್ನಯ್ಯನ ಲಿಂಕ್ ಇದೆ ಎನ್ನಲಾಗಿದ್ದು ಆಗಸ್ಟ್ 29ರಂದು ಚಿನ್ನಯ್ಯನನ್ನು ಬೆಂಗಳೂರಿಗೆ ಕರೆತಂದ ಎಸ್ಐಟಿ ಟೀಮ್ 2ನೇ ದಿನ ಮಹಜರು ಕಾರ್ಯ ಶುರು ಮಾಡಿತ್ತು. ಕೊಡಿಗೇಹಳ್ಳಿ ಲಾಡ್ಜ್‌ನಲ್ಲಿ ಮಹಜರು ನಡೆಸಿ, ವಿದ್ಯಾರಣ್ಯಪುರದ ತಿಂಡ್ಲು ಬಳಿಯ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಜರು ಪ್ರಕ್ರಿಯೆಯನ್ನು ನಡೆಸಿದ್ದಾರೆ. ಈ ಅಪಾರ್ಟ್‌ಮೆಂಟ್‌ಗೆ ಆಗಾಗ ಭೇಟಿಯಾಗಿ ಬುರುಡೆ ಬಗ್ಗೆ ಮಾತುಕತೆ ನಡೆಸುತ್ತಿದ್ದರು ಎನ್ನಲಾಗಿದೆ.