Saturday, August 30, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳ ಪ್ರಕರಣ : ಗಿರೀಶ್ ಮಟ್ಟಣ್ಣ ಎಸ್‌ಐಟಿ ವಿಚಾರಣೆ ಬಳಿಕ ಗಂಭೀರ ಆರೋಪ

ಧರ್ಮಸ್ಥಳ ಪ್ರಕರಣ : ಗಿರೀಶ್ ಮಟ್ಟಣ್ಣ ಎಸ್‌ಐಟಿ ವಿಚಾರಣೆ ಬಳಿಕ ಗಂಭೀರ ಆರೋಪ

ಮಂಗಳೂರು: ಧರ್ಮಸ್ಥಳ ಪ್ರಕರಣ ಸಂಬಂಧ ಸಾಮಾಜಿಕ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌ ಅವರನ್ನು ನಿನ್ನೆ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ತಮಗೆ ಬುರುಡೆಯನ್ನು ಯಾವ ಶೋ ರೂಂ ನಿಂದ ತಂದ್ರಿ ಎಂದು ಪ್ರಶ್ನೆ ಮಾಡಿದ್ದಾಗಿ ಗರಂ ಆಗಿ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ಮೆಟ್ಟಿಲು ಹತ್ತುತ್ತಿದ್ದಂತೆ ನನಗೆ ಎದೆ ಢವಢವ ಎಂದು ಬಡಿದುಕೊಳ್ಳಲು ಪ್ರಾರಂಭಿಸಿತು. ಅಲ್ಲಿ ಅಧಿಕಾರಿಗಳು ಜಗತ್ತಿನಲ್ಲಿ ಎಷ್ಟು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳಿವೆ ಅಂತಾ ಕೇಳಿದ್ರು. ನಂತರ ಯಾವ ಯಾವ ಪಾದ್ರಿ, ಮೌಲಿ, ಶೇಠ್ ಗಳಿಂದ ದೇವಸ್ಥಾನ ಹಾಳು ಮಾಡಲು ಎಷ್ಟು ದುಡ್ಡು ಕೊಟ್ಟಿದ್ದಾರೆ ಅಂತಾ ಕೇಳಿದ್ರು ಅದೆಲ್ಲದಕ್ಕೂ ನಾನು ಉತ್ತರ ನೀಡಿದೆ ಎಂದು ಟೀಕಾತ್ಮಕವಾಗಿ ಹೇಳಿದರು.

ನಂತರ ಬುರುಡೆಯನ್ನು ಯಾವ ಶೋ ರೂಂನಿಂದ ತಂದಿದ್ದೀರಿ? ಅದಕ್ಕೆ ಯಾವ ಕಾರ್ಪರೇಟರ್‌ ಬಣ್ಣ ಹಚ್ಚಿದ್ರು ಎಂದು ಕೇಳಿದರು. ಅದೆಲ್ಲದರ ದಾಖಲೆಯೊಂದಿಗೆ ನಾನು ನಂಬರ್‌ ಕೂಡಾ ಕೊಟ್ಟು ಬಂದಿದ್ದೇನೆ. ನಿಮಗೆ ನನ್ನಿಂದ ಇದೇ ಉತ್ತರದ ನಿರೀಕ್ಷೆ ಇತ್ತಲ್ವಾ ಎಂದು ಮಾಧ್ಯಮದವರಿಗೆ ಉತ್ತರಿಸಿದರು.

ಕಳೆದ ಎರಡು ತಿಂಗಳಿನಿಂದ ನಿಜವಾದ ಘಟನೆಗಳು ಏನು ನಡೆದಿದೆ ಅದನ್ನು ಬಿಟ್ಟು ನಮ್ಮ ಮೇಲೆಯೇ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಯಾವ ಮುಸ್ಲಿಂ ರಾಷ್ಟ್ರದಿಂದ ದುಡ್ಡು ಬಂತು, ಎಷ್ಟು ದೇವಾಲಯಗಳನ್ನು ಹಾಳು ಮಾಡಲು ಹಣ ಬಂತು ಎಂದು ಕೇಳುತ್ತಿದ್ದಾರೆ. ಆದರೆ ನಾನು ಬುರುಡೆ ಸಮೇತವಾಗಿ ಪ್ರತಿಯೊಂದಕ್ಕೂ ಸ್ಪಷ್ಟನೆ ಕೊಟ್ಟು ಬಂದಿದ್ದೇನೆ ಎಂದರು.

ಯಾರೇ ಒಬ್ಬ ವ್ಯಕ್ತಿ ಮೊಬೈಲ್‌ ಇರೋ ಕಾಲದಲ್ಲಿ ಸುಳ್ಳು ಹೇಳಲು ಸಾಧ್ಯವಿಲ್ಲ. ನಾನು ಅಲ್ಲಿದ್ದೆ, ಯಾರೋ ಇದ್ದರು ಎಂದು ಹೇಳೋಕೆ ಆಗಲ್ಲ. ಎಸ್‌ಐಟಿ ತನಿಖೆಯನ್ನು ಪಾರದರ್ಶಕವಾಗಿಯೇ ಮಾಡುತ್ತಿದ್ದಾರೆ. ದಯವಿಟ್ಟು ಅದನ್ನು ಸರಿಯಾಗಿ ಮಾಡಲು ಅವಕಾಶ ಕೊಡಿ. ನನ್ನ ಹತ್ರ ಇರೋ ಮಾಹಿತಿಯನ್ನು ಒಪ್ಪಿಸಲು ತಯಾರಿದ್ದೇನೆ ಎಂದಿದ್ದೇನೆ. ಅದಕ್ಕೆ ಅವರು ತಕ್ಷಣವೇ ಸ್ಪಂದಿಸಿದ್ದಾರೆ. ನನ್ನನ್ನು ಕರೆದಿದ್ದಾರೆ, ಅದೆಲ್ಲವನ್ನೂ ಶೇರ್‌ ಮಾಡಿದ್ದೇನೆ ಎಂದರು.

ಹೆಣಗಳನ್ನು ಹೂತು ಹಾಕುವಲ್ಲಿ ಯಾವ ರೀತಿ ಅಕ್ರಮಗಳು ನಡೆಯುತ್ತಿವೆ, ಪ್ರತಿ ದಾಖಲೆಗಳನ್ನು ಫೋರ್ಜರಿ ಮಾಡಿದ್ದಾರೆ. ಹೆಣ ಹೂತವನು ಯಾರೋ, ಸಹಿ ಹಾಕಿದವರು ಯಾರೋ ಆ ರೀತಿ ಆಗಿದೆ. ನಮ್ಮ ಗಮನಕ್ಕೆ ಏನೇನು ಸಂಶಯಗಳು ಬಂದಿವೆ, ಅವುಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.

ಇತ್ತ ಪ್ರಕರಣದ ಎ1 ಆರೋಪಿ ಆಗಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನನ್ನು ಆತನಿಗೆ ಸಂಬಂಧಿಸಿದ ಸ್ಥಳಗಳಿಗೆ ಮಹಜರು ನಡೆಸಲು ಶನಿವಾರ ಬೆಳಗ್ಗೆ 6 ಗಂಟೆಗೆ ಎಸ್‌ಐಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. 10 ದಿನಗಳ ಎಸ್‌ಐಟಿ ಕಸ್ಟಡಿಯಲ್ಲಿರುವ ಚಿನ್ನಯ್ಯ ಈಗಾಗಲೇ ಬಹುತೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ. ನ್ಯಾಯಾಲಯಕ್ಕೆ ಹಾಜರು ಪಡಿಸಲು ಕೆಲವೇ ದಿನಗಳಿರುವುದರಿಂದ ವಿಚಾರನೆ ಪ್ರಕ್ರಿಯೆ ಬಹುತೇಕ ಪೂರ್ಣಗೊಳಿಸಿ ಮಹಜರು ನಡೆಸಲು ಮುಂದಾಗಿದೆ.

RELATED ARTICLES
- Advertisment -
Google search engine

Most Popular