ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಸದ್ಯ ಜೈಲುಪಾಲಾಗಿದ್ದಾನೆ. ಇದೀಗ ಎಸ್ ಐ ಟಿ ಅಧಿಕಾರಿಗಳ ಬಳಿ ಅಸಲಿ ಸತ್ಯಾಂಶವನ್ನೆಲ್ಲಾ ತಿಳಿಸಿದ್ದು, ಸದ್ಯದಲ್ಲೇ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಎಸ್ ಐ ಟಿ ಅಧಿಕಾರಿಗಳು ಚಿನ್ನಯ್ಯ ಸೇರಿದಂತೆ ಅನೇಕರನ್ನು ವಿಚಾರಣೆಗೆ ಹಾಜರುಪಡಿಸಿದ್ದು, ಎಲ್ಲಾ ದಾಖಲೆ, ಹಲವು ಸಾಕ್ಷ್ಯ ಹಾಗೂ ಹೇಳಿಕೆ ದಾಖಲು ಪ್ರಕ್ರಿಯೆ ಪೂರ್ಣಗೊಳಿಸಿದೆ. ಅದರಂತೆ ಈ ತಿಂಗಳ ಕೊನೆಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಅನಾಥ ಶವಗಳನ್ನು ಹೂತು ಹಾಕಿದ್ದೇನೆ ಎಂದು ಸುಳ್ಳು ಹೇಳಿದ್ದ ಚಿನ್ನಯ್ಯ ಕೇಸ್ ಗೆ ಸಂಬಂಧಪಟ್ಟಂತೆ ಅ.30 ರಂದು ಎಸ್ ಐ ಟಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆದಿದ್ದು, ನ.23 ರ ಒಳಗೆ ಬೆಳ್ತಂಗಡಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯಾರದ್ದೋ ಮಾತು ಕೇಳಿ ನಾನು ನನ್ನ ಜೀವನ ಹಾಳು ಮಾಡಿಕೊಂಡೆ.. ಸುಮಾರು 60 ವರ್ಷದ ಜೀವನದಲ್ಲಿ ಇದುವರೆಗೆ ಯಾವುದೇ ಕಪ್ಪು ಚುಕ್ಕೆ ಬಂದಿಲ್ಲ.. ಆದರೆ ಬುರುಡೆ ಗ್ಯಾಂಗ್ ಸಹವಾಸ ಮಾಡಿ ದೊಡ್ಡ ತಪ್ಪು ಮಾಡಿದೆ ಎಂದು ಸುಜಾತ ಭಟ್ ತಿಳಿಸಿದರು.
ಮುಂದಿನ ವಾರದಲ್ಲಿ ಧರ್ಮಸ್ಥಳಕ್ಕ ಭೇಟಿ ನೀಡಬೇಕು ಎಂದುಕೊಂಡಿದ್ದೇನೆ, ಕೆಲವರ ಮಾತು ಕೇಳಿ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ್ದೆ.. ಬಹಳ ಪಾಪ ಪ್ರಾಯಶ್ಚಿತ ಕಾಡುತ್ತಿದೆ. ಹೀಗಾಗಿ ಮಂಜುನಾಥ ಮತ್ತು ಅಣ್ಣಪ್ಪನಲ್ಲಿ ಕ್ಷಮೆ ಕೇಳ್ತೀನಿ.. ಹೀಗಾಗಿ ದೇವಸ್ಥಾನದ ಮುಂದೆ ದೀರ್ಘದಂಡ ನಮಸ್ಕಾರ ಹಾಕುತ್ತೇನೆ ಎಂದು ಸುಜಾತ ಭಟ್ ತಿಳಿಸಿದರು.
ಕ್ಷೇತ್ರದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಳಿ ಕೂಡ ಕ್ಷಮೆ ಕೇಳುತ್ತೇನೆ ಅವರು ನನ್ನನ್ನು ಕ್ಷಮಿಸುತ್ತಾರೆ ಎಂಬ ನಂಬಿಕೆಯಿದೆ. ಕ್ಷೇತ್ರಕ್ಕೆ ಕಲ್ಲು ಎಸೆಯುತ್ತೇನೆ ಎಂದಿದ್ದು ತಪ್ಪು ಹಾಗೆ ಹೇಳಬಾರದಿತ್ತು.. ..ಮಗಳು ಸೇರಿ ಎಲ್ಲವೂ ಸೃಷ್ಠಿ..ಶಿವಶಂಕರ್ ಎಂಬುವರು ಹೇಳು ಎಂದು ಒತ್ತಾಯಿಸಿದ್ದಕ್ಕೆ ಹೇಳಿದೆ ಎಂದರು.
ಬುರುಡೆ ಗ್ಯಾಂಗ್ ಗೂ ನನಗೂ ಸಂಬಂಧ ವಿಲ್ಲ, ಅವರ ಮಾತು ಕೇಳಿಯೇ ನಾನು ಕೆಟ್ಟೆ.. ಇನ್ನು ನನ್ನ ಮನೆ ಬಾಗಿಲಿಗೆ ಅವ್ರು ಬಂದೂ ಒಳಗೆ ಬಿಡಲ್ಲ…. ನನಗೆ ಜೀವನ ಮಾಡಲು ಹಣ ಇಲ್ಲ, ಎಸ್ ಐಟಿ ನವ್ರು ಮೊಬೈಲ್ ಕೊಡಿಸಿದ್ರು.. ಎಸ್ ಐಟಿಗೆ ಎಲ್ಲಾ ಸತ್ಯವನ್ನು ಹೇಳಿದ್ದೇನೆ.. ಇದರಿಂದ ಮುಕ್ತಿ ಸಿಕ್ಕರೆ ಸಾಕು ಎಂದು ಸುಜಾತ ಭಟ್ ಹೇಳಿದರು.
ಅನನ್ಯ ಭಟ್ ಮುಗಿದ ಆದ್ಯಾಯ.. ಧರ್ಮಸ್ಥಳಕ್ಕೆ ಹೋಗಿ ಬಂದ ಮೇಲೆ ಹೊಸ ಜೀವನ ಪ್ರಾರಂಭ ಮಾಡುತ್ತೇನೆ.. ಬಿಗ್ ಬಾಸ್ ಗೆ ಹೋಗುವ ಆಸೆ ಇದೆ.. ವೈಲ್ಡ್ ಕಾಲ್ಡ್ ಎಂಟ್ರಿ ಒಂದು ವಾರ ಹೋಗಬೇಕು.. ಆಟ ಆಡಲು ನಾನು ಹೋಗಲ್ಲ ಬದಲಿಗೆ ಕ್ಷಮೆ ಕೇಳೋಕೆ ಬಿಗ್ ಬಾಸ್ ಹೋಗುತ್ತೇನೆ ಎಂದ ಸುಜಾತ ಭಟ್ ತಿಳಿಸಿದರು.