ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಬದಿಯ ಅರಣ್ಯ ಪ್ರದೇಶದಲ್ಲಿ ಎಸ್ಐಟಿ ತಂಡವು 5ನೇ ದಿನವೂ ಶೋಧಕಾರ್ಯ ಮುಂದುವರಿಸಿದೆ. ಇಂದಿನ ಕಾರ್ಯಾಚರಣೆ 9ನೇ ಸ್ಥಳದಲ್ಲಿ ನಡೆದಿದ್ದು, ಯಾವುದೇ ಮೃತದೇಹದ ಅವಶೇಷ ಪತ್ತೆಯಾಗಿಲ್ಲ. ಈ ಸ್ಥಳ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದಿನ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಿದೆ ಎಂಬ ಶಂಕೆಯಿದೆ.
ಇಂದಿನ ಕಾರ್ಯಾಚರಣೆಗೆ ಎಸ್ಐಟಿ ಅಧಿಕಾರಿಗಳು ಹೆಚ್ಚಿನ ತಜ್ಞರೊಂದಿಗೆ ಬಂದಿದ್ದು, 10ನೇ ಸ್ಥಳದಲ್ಲಿ ಅಗೆಯುವ ಪ್ರಕ್ರಿಯೆ ಆರಂಭವಾಗಿದೆ. ಕಾರ್ಯಾಚರಣೆ ಸಮಯದಲ್ಲಿ ಸ್ಥಳವನ್ನು ಪರದೆಯಿಂದ ಮುಚ್ಚಲಾಗಿತ್ತು. ದೂರುದಾರರು ಗುರುತಿಸಿದ ರಸ್ತೆಯ ಬದಿಯಲ್ಲಿಯೇ 9, 10 ಮತ್ತು 11ನೇ ಶೋಧಜಾಗಗಳು ಇರುವ ಸಾಧ್ಯತೆ ಇದೆ. 9ನೇ ಜಾಗದಲ್ಲಿ ಶೋಧ ಪೂರ್ಣಗೊಂಡಿದ್ದು, ಮುಂದಿನ ಸ್ಥಳಗಳ ಶೋಧ ನಿರೀಕ್ಷೆಯಲ್ಲಿದೆ.