ತುಮಕೂರು: ತುರುವೇಕೆರೆ ತಾಲ್ಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆ ಆಲಿಸಿದ್ದಾರೆ.
ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದ ಸಚಿವರು ಮಾರ್ಗಮಧ್ಯದಲ್ಲಿ ತುರುವೇಕೆರೆ ತಾಲ್ಲೂಕು ಕಚೇರಿಗೆ ಧಿಡೀರ್ ಭೇಟಿ ನೀಡಿದ್ದು, ಸಚಿವರನ್ನು ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಸಚಿವರ ಮುಂದೆ ರೈತರು ಹಾಗೂ ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಹೇಳಿಕೊಂಡಿದ್ದಾರೆ.
ಜಮೀನಿನಲ್ಲಿ ಓಡಾಡಲು ರಸ್ತೆ ಇಲ್ಲ ಎಂದು ರೈತರು ಸಚಿವರ ಮುಂದೆ ಅಳಲು ತೊಡಿಕೊಂಡಿದ್ದು, ರೈತರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ದೂರು ನೀಡಿದ್ದಾರೆ.
ಐದು ಬಾರಿ ನೋಟಿಸ್ ನೀಡಿದ್ದೇನೆ ಎಂಬ ಉತ್ತರ ನೀಡಿದ ತಹಶೀಲ್ದಾರ್ ಗೆ ಜನರ ಎದುರೇ ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಐದು ನೋಟಿಸ್ ನೀಡಿ ಇನ್ನೂ ಏತಕ್ಕೆ ಕಾಯ್ತಾ ಇದ್ದೀರಿ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಕಾರ್ಯವೈಖರಿಗೆ ಸಚಿವರು ಫುಲ್ ಗರಂ ಆಗಿದ್ದು, ಕೂಡಲೇ ದಾರಿ ತೆರವುಗೊಳಿಸುವಂತೆ ತಹಶೀಲ್ದಾರ್ ರೇಣುಕುಮಾರ್ ಗೆ ಸೂಚನೆ ನೀಡಿದರು.
ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದ ಸಚಿವ ಕೃಷ್ಣೇಭೈರೇಗೌಡ ಹಾಸನ ಕಡೆ ಪ್ರಯಾಣ ಬೆಳೆಸಿದರು.