ನಟ ಧ್ರುವ ಸರ್ಜಾ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಇದೀಗ ಪುಟ್ಟ ಮಗುವಿನ ಸಂಕಷ್ಟಕ್ಕೆ ಧ್ರುವ ಸಾಥ್ ನೀಡಿದ್ದಾರೆ. ಕಣ್ಣಿನಲ್ಲಿ ಪೊರೆ ಬೆಳೆದ ಪುಟ್ಟ ಕಂದಮ್ಮನ ಟ್ರೀಟ್‌ಮೆಂಟ್‌ಗೆ ನಟ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪುಟ್ಟ ಮಗು ಚಿರಂಜೀವಿಗೆ ಎರಡು ಕಣ್ಣಿನಲ್ಲೂ ಪೊರೆ ಬೆಳೆದ ಹಿನ್ನೆಲೆ ಟ್ರೀಟ್‌ಮೆಂಟ್‌ಗಾಗಿ ಧ್ರುವ ಸಹಕರಿಸಿದ್ದಾರೆ. ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಮಾತನಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗಾಗಿ ಪುಟ್ಟ ಮಗುವಿಗೆ ಯಶಸ್ವಿಗಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮೂಲಕ ಗಾರೆ ಕೆಲಸ ಮಾಡುವ ತಂದೆಯ ಬೆನ್ನಿಗೆ ನಿಂತಿದ್ದಾರೆ.