ಮುಂಬೈ : ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್ : ದಿ ರಿವೇಂಜ್’ (ಧುರಂಧರ್ 2) ಚಿತ್ರವು ಬಿಡುಗಡೆಯಾಗಿ 40 ದಿನಗಳು ಕಳೆದರೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲಾ’ ಮತ್ತು ಜಾಫರ್ ಜಾಕ್ಸನ್ ಅವರ ‘ಮೈಕಲ್’ ಅಂತಹ ದೊಡ್ಡ ಚಿತ್ರಗಳ ಪೈಪೋಟಿಯ ನಡುವೆಯೂ ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದೆ.
41ನೇ ದಿನದ ಗಳಿಕೆ ಎಷ್ಟು?
ಸ್ಯಾಕ್ನಿಲ್ಕ್ (Sacnilk) ಅಂಕಿಅಂಶಗಳ ಪ್ರಕಾರ, 41ನೇ ದಿನದಂದು (6ನೇ ಮಂಗಳವಾರ) ಈ ಸಿನಿಮಾ ದೇಶಾದ್ಯಂತ 2,925 ಶೋಗಳಿಂದ 1.35 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು
ಬಾಕ್ಸ್ ಆಫೀಸ್ ವಿವರ ಹೀಗಿದೆ:
ಒಟ್ಟು ಭಾರತೀಯ ಗ್ರಾಸ್ ಕಲೆಕ್ಷನ್: ₹1356.07 ಕೋಟಿ, ಒಟ್ಟು ಭಾರತೀಯ ನೆಟ್ ಕಲೆಕ್ಷನ್: ₹1132.99 ಕೋಟಿ
ವಿಶ್ವದಾದ್ಯಂತ ಬಾಹುಬಲಿ 2 ದಾಖಲೆಗೆ ಸನಿಹ!
41ನೇ ದಿನ ವಿದೇಶಗಳಲ್ಲಿ 0.25 ಕೋಟಿ ರೂಪಾಯಿ ಗಳಿಸುವ ಮೂಲಕ, ಚಿತ್ರದ ಒಟ್ಟು ವಿದೇಶಿ ಗಳಿಕೆ 424.75 ಕೋಟಿ ರೂಪಾಯಿಗೆ ತಲುಪಿದೆ. ಪ್ರಸ್ತುತ ಈ ಚಿತ್ರದ ವಿಶ್ವದಾದ್ಯಂತದ ಒಟ್ಟು ಗಳಿಕೆ 1780 ಕೋಟಿ ರೂಪಾಯಿ ಆಗಿದೆ.
ಇದೇ ವೇಗ ಮುಂದುವರಿದರೆ, ರಣವೀರ್ ಸಿಂಗ್ ಅಭಿನಯದ ಈ ಸಿನಿಮಾ ಎಸ್ ಎಸ್ ರಾಜಮೌಳಿ ಅವರ ‘ಬಾಹುಬಲಿ 2: ದಿ ಕನ್‌ಕ್ಲೂಷನ್’ (₹1788.06 ಕೋಟಿ) ದಾಖಲೆಯನ್ನು ಶೀಘ್ರದಲ್ಲೇ ಮುರಿಯಲಿದೆ. ಹೀಗಾದಲ್ಲಿ ಅಮೀರ್ ಖಾನ್ ಅವರ ‘ದಂಗಲ್’ ನಂತರ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಭಾರತದಲ್ಲಿ ವಾರವಾರು ಗಳಿಕೆಯ ವಿವರ ಹೀಗಿದೆ:
1ನೇ ವಾರ ₹674.17, 2ನೇ ವಾರ ₹263.65, 3ನೇ ವಾರ ₹110.60, 4ನೇ ವಾರ ₹54.70, 5ನೇ ವಾರ ₹19.42, 37ನೇ ದಿನ ₹1.55, 38ನೇ ದಿನ ₹3.00, 39ನೇ ದಿನ ₹3.40, 40ನೇ ದಿನ ₹1.05, 41ನೇ ದಿನ ₹1.35, ಒಟ್ಟು ಮೊತ್ತ ₹1132.99 ಕೋಟಿ ಗಳಿಕೆ ಕಂಡಿದೆ. (ಏಜೆನ್ಸಿಸ್)



