ಸಾಮಾನ್ಯವಾಗಿ ಮರೆವು ಅಥವಾ ನೆನಪಿನ ಶಕ್ತಿ ಕುಂದುತ್ತಿರುವುದು ಕೇವಲ ವೃದ್ಧಾಪ್ಯದ ಲಕ್ಷಣ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ಇದರ ಮುನ್ಸೂಚನೆಗಳು 40ನೇ ವಯಸ್ಸಿನಿಂದಲೇ ಪ್ರಾರಂಭವಾಗುತ್ತವೆ. ಈ ಕಾರಣಕ್ಕಾಗಿಯೇ 40ನೇ ವಯಸ್ಸನ್ನು ಮೆದುಳಿನ ಆರೋಗ್ಯದ ದೃಷ್ಟಿಯಿಂದ “ಟರ್ನಿಂಗ್ ಪಾಯಿಂಟ್” ಎನ್ನಲಾಗುತ್ತದೆ.
ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ, 40 ರಿಂದ 50 ರ ವಯಸ್ಸಿನಲ್ಲಿ ನಾವು ಸೇವಿಸುವ ಆಹಾರವು ನಮ್ಮ ವೃದ್ಧಾಪ್ಯದ ಮೆದುಳಿನ ಸಾಮರ್ಥ್ಯವನ್ನು ನಿರ್ಧರಿಸುತ್ತದೆ.
40ನೇ ವಯಸ್ಸೇ ಮುಖ್ಯವೇಕೆ ..?
ತಜ್ಞರ ಪ್ರಕಾರ, 40 ವರ್ಷಗಳ ನಂತರ ಮೆದುಳಿನಲ್ಲಿ ಸೂಕ್ಷ್ಮ ಬದಲಾವಣೆಗಳು ಶುರುವಾಗುತ್ತವೆ.
ಮೆದುಳಿನ ಕೆಲಸದ ವೇಗ ಸ್ವಲ್ಪ ಕಡಿಮೆಯಾಗುವುದು.
ಹೊಸ ವಿಷಯಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ ಕುಸಿತ.
ತಪ್ಪಾದ ಜೀವನಶೈಲಿಯಿಂದ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ.
ಆಹಾರದ ವಿಷಯದಲ್ಲಿ ಮೂರು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು

ಸಮಯ : ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಬಿಡಬೇಕು.
ಗುಣಮಟ್ಟ : ಸಂಸ್ಕರಿಸಿದ ಆಹಾರಕ್ಕಿಂತ (Processed Food) ನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡಿ.
ಪ್ರಮಾಣ : ಹಣ್ಣುಗಳು, ತರಕಾರಿಗಳು ಮತ್ತು ಬೀಜಗಳನ್ನು (Nuts) ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ.
ಮೆದುಳು ಚುರುಕಾಗಿರಲು ಏನು ಸೇವಿಸಬೇಕು?
ಉತ್ತಮ ಗುಣಮಟ್ಟದ ಆಹಾರವು ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ಆಹಾರ ಪಟ್ಟಿಯಲ್ಲಿ ಇವುಗಳಿರಲಿ:
ಹಣ್ಣು ಮತ್ತು ತರಕಾರಿ : ಅದರಲ್ಲೂ ವಿಶೇಷವಾಗಿ ಬ್ಲೂಬೆರ್ರಿ ಮೆದುಳಿನ ಆರೋಗ್ಯಕ್ಕೆ ರಾಮಬಾಣ.

ನಟ್ಸ್ ಮತ್ತು ಸೀಡ್ಸ್ : ಬಾದಾಮಿ, ಅಕ್ರೋಟ್ (Walnuts) ಮತ್ತು ಅಗಸೆ ಬೀಜಗಳಂತಹ ಪದಾರ್ಥಗಳು ಮೆದುಳಿನ ಕೋಶಗಳನ್ನು ರಕ್ಷಿಸುತ್ತವೆ.
ದೂರವಿಡಿ : ಬಿಳಿ ಸಕ್ಕರೆ ಮತ್ತು ಮೈದಾದಿಂದ ತಯಾರಿಸಿದ ಪದಾರ್ಥಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿ.
ಸಣ್ಣ ಬದಲಾವಣೆ – ದೊಡ್ಡ ಲಾಭ!
ನಿಮ್ಮ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯದ ಬದುಕಿನಲ್ಲಿ ಈ ಕೆಳಗಿನ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ:

ಸಿಹಿಯಾದ ಸ್ನ್ಯಾಕ್ಸ್ ಬದಲಿಗೆ ಹಣ್ಣುಗಳನ್ನು ತಿನ್ನಿ.
ಊಟದಲ್ಲಿ ಸೊಪ್ಪು-ತರಕಾರಿಗಳ ಪ್ರಮಾಣ ಹೆಚ್ಚಿಸಿ.
ಜಂಕ್ ಫುಡ್ ಸೇವನೆಯನ್ನು ನಿಯಂತ್ರಿಸಿ.
ನೆನಪಿಡಿ : ನೀವು 40ರ ಹರೆಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ 70ರ ವಯೋಮಾನದವರೆಗೂ ನೆನಪಿನ ಶಕ್ತಿಯನ್ನು ಕಾಪಾಡುತ್ತವೆ.



