ಹೊಸೂರು : ಕೆ.ಆರ್.ನಗರ ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಚಿಕ್ಕವಡ್ಡರಗುಡಿ ದಿಲೀಪ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಅರ್ಜುನಹಳ್ಳಿ ಗ್ರಾಮದ ಕಾಳಮ್ಮ ಅವಿರೋಧವಾಗಿ ಆಯ್ಕೆಯಾದರು.
ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚಿಕ್ಕವಡ್ಡರಗುಡಿ ದಿಲೀಪ್ ಕುಮಾರ್ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಕಾಳಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು, ಬೇರೆ ಯಾರು ನಾಮ ಪತ್ರ ಸಲ್ಲಿಸದೇ ಇದ್ದರಿಂದ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕಾಳಮ್ಮ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸಿಡಿಪಿಓ ಪೂರ್ಣಿಮ ಪ್ರಕಟಿಸಿದರು. ಪಿಡಿಓ ಪೂರ್ಣಿಮಾ ಸಹಕಾರ ನೀಡಿದರು
ನೂತನ ಅಧಕ್ಷರು ಉಪಾಧ್ಯಕ್ಷರನ್ನು ಪಕ್ಷಾತೀತವಾಗಿ ಅಭಿನಂದಿಸಲಾಯಿತು.
ನಂತರ ನೂತನ ಅಧ್ಯಕ್ಷ ದಿಲೀಪ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಬ್ರಮಾಚರಣೆ ಮಾಡಿದರು.
ನೂನತ ಅಧ್ಯಕ್ಷ ದಿಲೀಪ್ ಮಾತನಾಡಿ ಪಂಚಾಯತಿ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಲು ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಸಹಕಾರ ನೀಡಿದ್ದಾರೆ, ಪಂಚಾಯತಿಯ ವ್ಯಾಪ್ತಿಯ ಎಲ್ಲ ಗ್ರಾಮಗಳ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು. ಅಧ್ಯಕ್ಷ ಸ್ಥಾನ ನನಗೆ ಒಲಿಯಲು ಜಿ.ಪ.ಮಾಜಿ ಸದಸ್ಯೆ ಪುಷ್ಪಲತಾರಮೇಶ್ ಅವರು ಕಾರಣರಾಗಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಚುನಾವಣೆಯಲ್ಲಿ ಗ್ರಾ.ಪಂ.ಸದಸ್ಯರಾದ ಎ.ಆರ್. ಮಹಾದೇವಪ್ಪ, ಶಿವಣ್ಣ, ಕೆ.ಎಂ.ಮಂಜು, ವಜ್ರಕುಮಾರ್, ಬಸವರಾಜು, ಅನೀತಾ, ಸಿರಿ, ಚಂದ್ರಕಲಾ, ಹೇಮಾವತಿ, ಆಶಾ, ರತ್ನ, ಕೃಷ್ಣಮೂರ್ತಿ ಇದ್ದರು.
ಶಾಸಕ ಡಿ.ರವಿಶಂಕರ್ ಹಾಗೂ ತಾ.ಶರಣು ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಪಿ.ರಮೇಶ್, ಕಾಂಗ್ರೆಸ್ ಮುಖಂಡ ಬಿ.ಟಿ.ಮೋಹನ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ಯೋಗೇಶ್ ಆಗಮಿಸಿ ನೂತನ ಅಧ್ಯಕ್ಷ ದಿಲೀಪ್ ಅವರಿಗೆ ಬಾರಿಗಾತ್ರದ ಹಾರಹಾಕಿ ಅಭಿನಂದಿಸಿ ಶುಭ ಕೋರಿದರು.
ಟಿಎಪಿಸಿಂಎಸ್ ಮಾಜಿ ಅಧ್ಯಕ್ಷ ರಾಜೇಗೌಡ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಚಂದ್ರಪ್ಪ,ಕಾಂಗ್ರೆಸ್ ಮುಖಂಡರಾದ ಬುಡಿಗೌಡ, ಧನಂಜಯ, ಜಿ.ಸಿ.ಸತೀಶ್,ಮಂಜು, ಚಿತ್ರ ನಟ ಮೈಕೋ ನಾಗರಾಜ್ ಸೇರಿದಂತೆ ಅನೇಕರು ಅಭಿನಂದಿಸಿದರು.