ಮೈಸೂರು : ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ನಗರದ ಡಾ.ರಾಜಕುಮಾರ್ ವೃತ್ತದಲ್ಲಿ (ಫೌಂಟೆನ್ ಸರ್ಕಲ್) ಝೆಡ್ ಮಾರ್ಕ್ ಸಂಸ್ಥೆಯಿಂದ ಉಚಿತ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಈ ಕುರಿತು ದಸರಾ ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷರಾದ ಸೈಯದ್ ಇಕ್ಬಾಲ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಮೈಸೂರಿನ ಝೆಡ್ ಮಾರ್ಕ್ ಸಂಸ್ಥೆಯವರು ದಸರಾ ಸಂದರ್ಭದಲ್ಲಿ ನಗರದ ಹಲವು ವೃತ್ತಗಳಲ್ಲಿ ಉಚಿತವಾಗಿ ದೀಪಾಲಂಕಾರ ಮಾಡುತ್ತಿದ್ದಾರೆ. ದಸರಾ ಸಂಭ್ರಮದಲ್ಲಿ ನಗರಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಇಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಮನಸೋಲುತ್ತಾರೆ. ಹೀಗಾಗಿ ವಿದ್ಯುತ್ ದೀಪಾಲಂಕಾರ ಪ್ರಾಮುಖ್ಯತೆ ಪಡೆದಿದೆ.ಈನಿಟ್ಟಿನಲ್ಲಿ ಶಾಸಕರಾದ ತನ್ವೀರ್ ಸೇಠ್ ಅವರ ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ದೀಪಾಲಂಕಾರ ನಡೆಯುತ್ತಿದೆ ಎಂದರು.
ಝೆಡ್ ಮಾರ್ಕ್ ಸಂಸ್ಥೆಯ ಝುಬೇರ್ ಅವರು ಮಾತನಾಡಿ, ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರು ನಿರಾಶೆ ಪಡಬಾರದು ಎಂಬ ಸದುದ್ದೇಶದಿಂದ ಫೌಂಟೇನ್ ವೃತ್ತದಲ್ಲಿ ದೀಪಾಲಂಕಾರ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಫ್ರೋಜ್ ಖಾನ್ ಮತ್ತಿತರರು ಇದ್ದರು.