ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಸಂಜೋತ ಭಂಡಾರಿ ನಿರ್ದೇಶನದ “ಲಂಗೋಟಿ ಮ್ಯಾನ್’ ಚಿತ್ರ ಇಂದು ತೆರೆಕಾಣುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕಿ ಸಂಜೋತ ಭಂಡಾರಿ, “ಲಂಗೋಟಿ ಮ್ಯಾನ್’ ಚಿತ್ರ ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿದ ಮೇಲೆ ಶೀರ್ಷಿಕೆ ಸೂಕ್ತ ಅಂತ ಗೊತ್ತಾಗಲಿದೆ. ಯಾವ ಸಮುದಾಯವನ್ನು ಅವಮಾನ ಮಾಡುವ ಮತ್ತು ನೋಯಿಸುವ ಉದ್ದೇಶ ಹೊಂದಿಲ್ಲ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ’ಎಂದು ಹೇಳಿದರು
ಲಂಗೋಟಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಾತನಿಗೆ ಸಂಪ್ರದಾಯ ಆಚಾರ ವಿಚಾರ ಪಾಲಿಸಬೇಕು ಎನ್ನುವ ನಂಬಿಕೆ. ಸಂಪ್ರದಾಯ ಹೇರಿಕೆಯಿಂದ ನಾಯಕ ರೆಬೆಲ್ ಆಗುತ್ತಾನೆ. ಕಥೆ ಆಸಕ್ತಿಕರವಾಗಿದೆ. ಇದೊಂದು ಉತ್ತಮ ಕೌಟುಂಬಿಕ ಚಿತ್ರ ಎನ್ನುವುದು ನಟ ಧರ್ಮೇಂದ್ರ ಮಾತು.
ನಟ ಆಕಾಶ್ ರಾಂಬೋ ಮಾತನಾಡಿ, ತಾತ ಮೊಮ್ಮಗನ ಸುತ್ತ ಮುತ್ತ ನಡೆಯುವ ಕಥೆ. ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು ಎಂಬ ಬಯಕೆ. ಮೊಮ್ಮಗನಿಗೆ ಅಂಡರ್ ವೇರ್ ಹಾಕಿಕೊಳ್ಳುವ ಆಸೆ. ತಾತ ಇರುವವರೆಗೂ ಅಂಡರ್ ವೇರ್ ಹಾಕಲು ಬಿಡಲ್ಲ. ಅವರು ಸಾಯುತ್ತಿಲ್ಲ. ನಾನು ಅಂಡರ್ ವೇರ್ ಹಾಕಲು ಆಗುತ್ತಿಲ್ಲ ಎಂಬುದು ಮೊಮ್ಮಗನ ಕೊರಗು ಎಂದರು. ಈ ಚಿತ್ರದಲ್ಲಿ ಸಂಹಿತಾ ವಿನ್ಯಾ ಕೂಡಾ ನಟಿಸಿದ್ದಾರೆ.