ಮೈಸೂರು: ಇಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಗೆ ನಿರಾಶದಾಯಕವಾಗಿದೆ ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತ ರ ಓಲೈಕೆಗೆ ಹೆಚ್ಚು ಒತ್ತು ನೀಡಿ ಬಹುಸಂಖ್ಯಾತ ಹಿಂದುಗಳಿಗೆ ಚೆಂಬು ನೀಡಿದ್ದಾರೆ ,ಅಲ್ಪಸಂಖ್ಯಾತ ಕ್ರಿಶ್ಚಿಯನ್ ರಿಗೆ ಅಭಿವೃದ್ಧಿ ನಿಗಮ,ಮುಸ್ಲಿಮರಿಗೆ ಶಾದಿ ಮಹಲ್ ಗಳ ಭರಪೂರ ಕೊಡುಗೆ ನೀಡಿ ಹಿಂದೂಗಳಿಗೆ ದ್ರೋಹ ಬಗೆದಿದ್ದಾರೆ.
ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಇಲ್ಲಾ ಹಾಗೂ ಯುವಜನತೆಗೆ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಯಾವುದೇ ಮಾರ್ಗೋಪಯ ರೂಪಿಸಿಲ್ಲ. ಒಟ್ಟಾರೆ ಅಲ್ಪಸಂಖ್ಯಾತ ರಿಗೆ ಹರುಷ ಹಿಂದೂಗಳಿಗೆ ಬರೆ ಹಾಕಿ ಸಾಲದ ಬರಪೂರ ಕೊಡುಗೆ ನೀಡುವ ಮುಖಾಂತರ ಯಾವುದೇ ವಸ್ತುಗಳ ಬೆಲೆ ಇಳಿಸುವ ಪ್ರಯತ್ನ ಮಾಡದೆ ನಾಡಿನ ಜನತೆಗೆ ದ್ರೋಹ ಬಗೆದ ಬಜೆಟ್ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.