ಬಾಗಲಕೋಟೆ : ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು, ಕೆಲಸಗಾರರ ಸೇವೆ ಜೊತೆಗೆ ಅವರ ಕುಟುಂಬ ಭದ್ರತೆಯು ನಮಗೆ ಅಷ್ಟೇ ಮುಖ್ಯ ಎಂದು ಮಾಜಿ ಶಾಸಕ, ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಛೇರಿಯಲ್ಲಿ ಸೋಮವಾರ ಭಾರತ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದ ಸಾಮಾಜಿಕ ಸುರಕ್ಷೆಯ ಇಎಸ್‌ಐ ಇಲಾಖೆಯಿಂದ ಫಲಾನುಭವಿ ಕುಟುಂಬಕ್ಕೆ ಪಿಂಚಣಿಯ ಮೊದಲ ಚೆಕ್ ವಿತರಿಸಿ ಮಾತನಾಡಿದರು.
ಸಂಘದಲ್ಲಿ ಕಾರ್ಯನಿರ್ವಯಿಸುತ್ತಿರುವ ಎಲ್ಲ ನೌಕರರ ಹಾಗೂ ಕೆಲಸಗಾರರ ಸೇವೆಯ ಜತೆಗೆ ಅವರಿಗೆ ಸಿಗಬೇಕಾದ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮೊದಲನಿಂದಲೂ ಜಾರಿಯಲ್ಲಿವೆ.ಆಕಸ್ಮಿಕ ಹಾಗೂ ಅಪಘಾತದಲ್ಲಿ ಮೃತ ಪಟ್ಟ ನೌಕರರ ಕುಟುಂಬಗಳಿಗೆ ಸರಕಾರದ ಸೌಲಭ್ಯ ದೊರಕಿಸಿ ಕೊಡುವುದು ಅಲ್ಲದೆ ಸಂಘದಿಂದ ಸಹಾಯ ಮಾಡಿದ ಸಾಕಷ್ಟು ಉದಾರಣೆಗಳಿವೆ ಎಂದರು.
ಬಾಗಲಕೋಟೆ ಬಿವ್ಹಿವ್ಹಿ ಸಂಘದ ಆಯುರ್ವೆದ ಮಹಾವಿದ್ಯಾಯಲ್ಲಿ ಮುಕ್ತಿವಾಹನದ ಡ್ರೈವರ ಶಂಕ್ರಯ್ಯ ಮಠದ ಇವರು ಎರಡು ವರ್ಷಗಳ ಹಿಂದೆ ಮನೆಯಿಂದ ಹೊರಟು ಕೆಲಸಕ್ಕೆ ಬರುವ ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರಣ, ಸಾಮಾಜಿಕ ಸುರಕ್ಷಾ ಯೋಜನೆಯ ಇಎಸ್‌ಐ ಇಲಾಖೆಯು ಮೃತ ಡ್ರೈವರ್ ಶಂಕ್ರಯ್ಯ ಮಠದ ಅವರ ಪತ್ನಿ ಲಕ್ಷ್ಮೀಹಾಗೂ ಅವರ ಮೂರು ಜನ ಹೆಣ್ಣು ಮಕ್ಕಳಿಗೆ ಒಂಭತ್ತು ಸಾವಿರ ಮಾಸಿಕ ಪಿಂಚಣಿ ಮಂಜೂರು ಮಾಡಿದೆ.ಎರಡು ವರ್ಷದ ಬಾಕಿ ಇದ್ದ ಎರಡು ಲಕ್ಷ ಹದಿಮೂರು ಸಾವಿರ ಹಣವೂ ಕೂಡಾ ಕುಟುಂಬಕ್ಕೆ ಸಂದಾಯವಾಗಿದೆ. ಇಂದು ಫಲಾನುಭವಿಗೆ ಮೊದಲ ಚೆಕ್‌ನ್ನು ವಿತರಿಸಿದರು.
ಈ ಸಂದರ್ಭದಲ್ಲಿ¨ ಭಾರತ ಸರಕಾರ ಕಾರ್ಮಿಕ ಹಾಗೂ ಉದ್ಯೋಗ (ಇಎಸ್‌ಐ)ಇಲಾಖೆಯ ಪ್ರಬಂಧಕರಾದ ಮಂಜುನಾಥ ಬಡಿಗೇರ, ಸಂಘದ ಆಡಳಿತಾಧಿಕಾರಿ ವಿ..ಆರ್ ಶಿರೋಳ, ಬಿವಿವಿಸಂಘದ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ, ಬಿವಿವಿಸಂಘದ ನೌಕರರ ಕ್ಷೇಮಾಭಿವೃದ್ಧಿ ಅಧಿಕಾರಿ ಎಚ್.ಎಚ್.ಯಾದವಾಡ ಸೆರಿದಂತೆ ಫಲಾನುಭವಿ ಕುಟುಂಬ ಸದಸ್ಯರು ಇದ್ದರು.