ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹಾಡ್ಯ ಕೃಷಿಪತ್ತಿನ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ ಷೇರುದಾರ ರೈತರಿಗೆ 7.49 ಕೋಟಿ ರೂ ವಿವಿಧ ಸಾಲವನ್ನು ವಿತರಿಸಿದೆ ಎಂದು ಸಂಘದ ಅಧ್ಯಕ್ಷ ಕಗ್ಗಳ ಬಸವರಾಜು ತಿಳಿಸಿದರು.
ಸಂಘದ ಅವರಣದಲ್ಲಿ ನಡೆದ 2025 ರ ಸಂಘ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೀಡಲಾಗಿರುವ ಸಾಲದಲ್ಲಿ 518 ಸದಸ್ಯರಿಗೆ 6.78ಕೋಟಿ ರೂ ಕೆಸಿಸಿ ಸಾಲ, 73 ಮಂದಿಗೆ 46 ಲಕ್ಷ ಸೌದೆ ಸಾಲ ಮತ್ತು ಒಬ್ಬರಿಗೆ 10 ಲಕ್ಷ ವಾಹನ ಸಾಲ, 9 ಮಂದಿಗೆ 14.50 ಲಕ್ಷರೂ ಬಲ್ಕ್ ಶೆಡ್ಡ್ ಸಾಲವನ್ನು ನೀಡಿರುವುದಾಗಿ ಮಾಹಿತಿ ನೀಡಿದರು.
ಸಂಘವು ಪ್ರಸಕ್ತವಾಗಿ 18 ಲಕ್ಷ ರೂ ಲಾಭದಲ್ಲಿದ್ದು ಮುಂದಿನ ದಿನಗಳಲ್ಲಿ ಷೇರುದಾರಿಗೆ ಅನುಕೂಲವಾಗುವಂತೆ ಕೆಸಿಸಿ ಬೆಳೆ ಸಾಲವನ್ನು 8 ಕೋಟಿ ರೂಗಳಿಗೆ ಹೆಚ್ಚಿಸುವುದರ ಜೊತಗೆ ನೀಡಿರುವ ಸಾಲವನ್ನು ಸಮಪರ್ಕವಾಗಿ ವಸೂಲಾತಿಗೆ ಕ್ರಮ ಕೈಗೊಂಡು ಸಂಘ ಅಭಿವೃದ್ದಿ ಪಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಮಣಿಲಮ್ಮ, ನಿರ್ದೇಶಕರಾದ ಎಚ್.ಡಿ.ವೀರಭದ್ರಪ್ಪ, ಎಚ್.ಸಿ.ರಾಜಶೇಖರಯ್ಯ, ಹನುಮಂತ ಶೆಟ್ಟಿ, ಎಚ್.ಬಿ.ಪ್ರಕಾಶ್, ಮಹೇಶ್, ಚಂದ್ರೇಗೌಡ, ಸರೋಜಮ್ಮ, ಎ.ವಿ.ಚಂದ್ರಶೇಖರಯ್ಯ, ಎಚ್.ವಿ.ರಾಕೇಶ್, ಸಂಘದ ಸಿಇಓ ಜಿ.ಸಿ.ಆನಂತ್, ಸಿಬ್ಬಂದಿಗಳಾದ ಕೆ.ಸಿ.ಕುಮಾರ, ವೆಂಕಟೇಶ್, ಶಿವಪ್ರಸಾದ್, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಹಾಜರಿದ್ದರು.