ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದಾನಿಗಳನ್ನು ರಾಜಕೀಯ ಪಕ್ಷಗಳೊಂದಿಗೆ ಲಿಂಕ್ ಮಾಡುವ ಆಲ್ಫಾನ್ಯೂಮರಿಕ್ ಸೀರಿಯಲ್ ಕೋಡ್ ಸಹಿತ ಎಲೆಕ್ಟೋರಲ್ ಬಾಂಡ್‌ಗಳ ಕುರಿತಾದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಯಾವುದೇ ಮಾಹಿತಿಯನ್ನು ಹತ್ತಿಕ್ಕಲಾಗಿಲ್ಲ ಎಂದು ಹೇಳುವ ಅಫಿಡವಿಟ್ ಅನ್ನು ಗುರುವಾರ ಸಂಜೆ ೫ ಗಂಟೆಯೊಳಗೆ ಸಲ್ಲಿಸುವಂತೆಯೂ ಎಸ್‌ಬಿಐ ಅಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಎಸ್‌ಬಿಐ ಒದಗಿಸಿದ ಎಲ್ಲಾ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪಂಚ ಸದಸ್ಯರ ಪೀಠ ಸೋಮವಾರ ಎಸ್‌ಬಿಐ ಗೆ ಆದೇಶಿಸಿದೆ. ನಿಮ್ಮ ಬಳಿ ಇರುವ ಚುನಾವಣಾ ಬಾಂಡ್‌ಗಳ ಕುರಿತಾದ ಎಲ್ಲಾ ಮಾಹಿತಿ ಬಹಿರಂಗಪಡಿಸಬೇಕು,ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಚುನಾವಣಾ ಬಾಂಡ್‌ಗಳ ಕುರಿತಂತೆ ಎಸ್‌ಬಿಐ ಒದಗಿಸಿದ ಅಪೂರ್ಣ ಡೇಟಾ ಕುರಿತಾದ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆ ನೀಡಲಾಗಿದೆ.